ಮುಂಬೈ: ಬಾಲಿವುಡ್ ನಟಿ ದಿವಂಗತ ಶ್ರೀದೇವಿ ಪತಿ, ನಿರ್ಮಾಪಕ ಬೋನಿ ಕಪೂರ್ ವಿರುದ್ಧ ಕೋಟ್ಯಾಂತರ ರೂಪಾಯಿ ಹಣಕಾಸಿನ ಅವ್ಯವಹಾರ ಆರೋಪ ಕೇಳಿಬಂದಿದೆ.
ಸಿನಿಮಾ ಚಿತ್ರೀಕರಣಕ್ಕಾಗಿ ಪ್ರಾಪರ್ಟಿ ಮಾರಾಟ ಮಾಡಿದ್ದ ಉದ್ಯಮಿಯೊಬ್ಬರು ಈ ಆರೋಪ ಮಾಡಿದ್ದಾರೆ. ತಮ್ಮಿಂದ ಚಿತ್ರೀಕರಣಕ್ಕೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಹಣ ಕೊಡದೇ ವಂಚಿಸಿದ್ದಾರೆ ಎಂದು ಬೋನಿ ಕಪೂರ್ ವಿರುದ್ಧ ಉದ್ಯಮಿಯೊಬ್ಬರು ಆರೋಪಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಬೋನಿ ಕಪೂರ್ ಆ ವ್ಯಕ್ತಿಗೆ ನಮ್ಮ ಸಂಸ್ಥೆಯಿಂದ 1.70 ಕೋಟಿ ರೂ. ಬಿಲ್ ನೀಡಬೇಕಿತ್ತು. ಸಿನಿಮಾ ಬಿಡುಗಡೆ ಮುನ್ನವೇ 1.07 ಕೋಟಿ ರೂ. ಪಾವತಿಸಿದ್ದೆವು. ಆತನಿಗೆ ಉಳಿದ ಹಣವನ್ನು ಸಿನಿಮಾ ಬಿಡುಗಡೆ ನಂತರ ಕೊಡುವುದಾಗಿ ಹೇಳಿದ್ದೆ. ಆಗ ಆತ ಒಪ್ಪಿಕೊಂಡು ಹೋಗಿದ್ದ. ಇದು ಚಿತ್ರರಂಗದಲ್ಲಿ ಅಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಒಂದೊಮ್ಮೆ ನಾನು ಮೋಸಗಾರ ಆಗಿದ್ದರೆ 50 ವರ್ಷದಿಂದ ಚಿತ್ರರಂಗದಲ್ಲಿ ಉಳಿಯುತ್ತಿದ್ದೆನೇ ಎಂದು ಬೋನಿ ಕಪೂರ್ ಪ್ರಶ್ನಿಸಿದ್ದಾರೆ.
ಈ ಹಿಂದೆ ನನ್ನ ಜೊತೆಗೆ ಕೆಲಸ ಮಾಡಿದ ಯಾರನ್ನೇ ಆದರೂ ಕೇಳಿ ನೋಡಬಹುದು. ನಾನು ಯಾರಿಗಾದರೂ ತಡವಾಗಿ ಪೇಮೆಂಟ್ ಮಾಡಿದ್ದು ಅಥವಾ ಪೇಮೆಂಟ್ ಮಾಡದೇ ವಂಚಿಸಿದ್ದರೆ ಹೇಳಲಿ ಎಂದು ಬೋನಿ ಕಪೂರ್ ಸವಾಲು ಹಾಕಿದ್ದಾರೆ.