ಎದೆನೋವಿನಿಂದ ಆಸ್ಪತ್ರೆಗೆ ದಾಖಲಾದ ನಟ ಅಮಿತಾಭ್ ಬಚ್ಚನ್
ಬೆಳಿಗ್ಗೆ ಎದೆನೋವು ಕಾಣಿಸಿಕೊಂಡ ಬೆನ್ನಲ್ಲೇ ಅವರನ್ನು ಕೋಕಿಲಾ ಬೆನ್ ಆಸ್ಪತ್ರೆಗೆ ದಾಖಲಿಸಲಾಯಿತು. ತಕ್ಷಣವೇ ಅವರಿಗೆ ಆಂಜಿಯೋಪ್ಲಾಸ್ಟಿ ಮಾಡಿ ಬ್ಲಾಕ್ ಸರಿಪಡಿಸಲಾಗಿದೆ. ಸದ್ಯಕ್ಕೆ ಅಮಿತಾಭ್ ಆರೋಗ್ಯ ಸುಧಾರಿಸಿದೆ ಎನ್ನಲಾಗಿದೆ. ಅವರಿಗೆ ಈಗ 81 ವರ್ಷ.
ಈ ಇಳಿವಯಸ್ಸಿನಲ್ಲೂ ಅಮಿತಾಭ್ ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ನಾಯಕರಾಗಿರುವ ಕಲ್ಕಿ ಸಿನಿಮಾ ಶೂಟಿಂಗ್ ನಲ್ಲಿ ಸತವಾಗಿ ತೊಡಗಿಸಿಕೊಂಡಿದ್ದರು. ಇದರಿಂದ ಅವರಿಗೆ ದಣಿವಾಗಿದೆ. ಕೆಲವು ದಿನ ಬ್ರೇಕ್ ಪಡೆಯಲು ನಿರ್ಧರಿಸಿದ್ದರು. ಇದರ ಬೆನ್ನಲ್ಲೇ ಅನಾರೋಗ್ಯ ಕಾಣಿಸಿಕೊಂಡಿದೆ.
ನಿನ್ನೆ ರಾತ್ರಿಯೂ ಕೂಡಾ ಅವರು ತಮ್ಮ ಅಭಿಮಾನಿಗಳೊಂದಿಗೆ ಸೋಷಿಯಲ್ ಮೀಡಿಯಾದಲ್ಲಿ ಸಂದೇಶ ಬರೆದು ಸಂವಾದ ನಡೆಸಿದ್ದರು. ಆದರೆ ಇಂದು ಬೆಳಿಗ್ಗೆ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದೆ. ಸದ್ಯಕ್ಕೆ ಅವರು ಚೇತರಿಸಿಕೊಳ್ಳುತ್ತಿದ್ದು, ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳು ಆತಂಕಪಡುವ ಅಗತ್ಯವಿಲ್ಲ.