ಬೆಂಗಳೂರು: ಜೀ ಕನ್ನಡದಲ್ಲಿ ಪ್ರಸಾರವಾಗುವ ಅಣ್ಣಯ್ಯ ಧಾರವಾಹಿಯ ಮುಂಬರುವ ಸಂಚಿಕೆಯಲ್ಲಿ ನಾಯಕ-ನಾಯಕಿ ಶಿವು, ಪಾರು ಫಸ್ಟ್ ನೈಟ್ ಸೀನ್ ಇದೆ. ಇದರ ಪ್ರೋಮೋ ನೋಡಿ ಈಗ ಪ್ರೇಕ್ಷಕರು ಅಯ್ಯೋ ಶಿವನೇ ಎನ್ನುತ್ತಿದ್ದಾರೆ.
ಅಣ್ಣಯ್ಯ ಧಾರವಾಹಿ ಈಗ ರೋಚಕ ಘಟ್ಟದಲ್ಲಿದೆ. ಒಂದೆಡೆ ತಂಗಿ ರಾಣಿಯ ಮದುವೆ ಮಾಡಿದ ಖುಷಿಯಲ್ಲಿ ಅಣ್ಣಯ್ಯ ಇದ್ದರೆ ಇತ್ತ ಪಾರ್ವತಿ ತನ್ನ ಅತ್ತೆಯ ಹುಡುಕಾಟ ಶುರು ಮಾಡಿದ್ದಾಳೆ. ಇದರ ನಡುವೆ ತಂಗಿಯಂದಿರು ಅಣ್ಣ-ಅತ್ತಿಗೆಗೆ ಮನೆಗೊಂದು ಮಗು ಕೊಡಿ ಎಂದು ಬೆನ್ನು ಬಿದ್ದಿದ್ದಾರೆ.
ಅದರಂತೆ ತಂಗಿಯಂದಿರು ಸೇರಿಕೊಂಡು ಪಾರು-ಶಿವುಗೆ ಫಸ್ಟ್ ನೈಟ್ ಅರೇಂಜ್ ಮಾಡಿದ್ದಾರೆ. ಆದರೆ ಈ ಫಸ್ಟ್ ನೈಟ್ ಸೀನ್ ಗಳನ್ನು ತೀರಾ ರೊಮ್ಯಾಂಟಿಕ್ ಆಗಿ ಚಿತ್ರೀಕರಿಸಲಾಗಿದೆ. ಇದರ ಪ್ರೋಮೋಗಳನ್ನು ಜೀ ಕನ್ನಡ ಹರಿಯಬಿಟ್ಟಿದೆ.
ಶೃಂಗಾರದ ಹೊಂಗೇ ಮರ ಹಾಡಿಗೆ ಪಾರು-ಶಿವು ಮೈ ಚಳಿ ಬಿಟ್ಟು ಹೆಜ್ಜೆ ಹಾಕಿದ್ದಾರೆ. ಇಬ್ಬರ ಶೃಂಗಾರದ ಸನ್ನಿವೇಶ ನೋಡಿ ನೆಟ್ಟಿಗರು ಧಾರವಾಹಿಯಲ್ಲಿ ಇದೆಲ್ಲಾ ಬೇಕಿತ್ತಾ? ಮನೆಯವರ ಜೊತೆ ಕುಳಿತುಕೊಂಡು ನೋಡಲು ಮುಜುಗರವಾಗುತ್ತದೆ ಎಂದಿದ್ದಾರೆ. ಇನ್ನು ಕೆಲವರು ಅಬ್ಬಾ.. ಈ ಜೋಡಿಯನ್ನು ನೋಡ್ತಿದ್ದರೆ ಸದ್ಯದಲ್ಲೇ ಇಬ್ಬರೂ ನಿಜ ಜೀವನದಲ್ಲೂ ಒಂದಾಗೋದು ಗ್ಯಾರಂಟಿ ಎನ್ನುತ್ತಿದ್ದಾರೆ.