8 ವರ್ಷ ಸೇವೆ ಸಲ್ಲಿಸಿಯೂ ಆರ್ ಸಿಬಿ ನಡೆದುಕೊಂಡ ರೀತಿಗೆ ಚಾಹಲ್ ಬೇಸರ
 
ಆರ್ ಸಿಬಿ ಯಜುವೇಂದ್ರ ಚಾಹಲ್ ರನ್ನು ಹರಾಜಿಗೆ ಬಿಟ್ಟಾಗ ತಮ್ಮನ್ನು ನಡೆಸಿಕೊಂಡ ರೀತಿಗೆ ಸಂದರ್ಶನವೊಂದರಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ.
									
				ಸಂದರ್ಶನವೊಂದರಲ್ಲಿ ಮಾತನಾಡಿರುವ ಚಾಹಲ್, ಆರ್ ಸಿಬಿಯಿಂದಾಗಿಯೇ ನನಗೆ ಟೀಂ ಇಂಡಿಯಾದಲ್ಲಿ ಆಡುವ ಅವಕಾಶ ಸಿಕ್ಕಿತು. ವಿರಾಟ್ ಭಯ್ಯಾ ನನಗೆ ಬೆಂಬಲ ನೀಡಿದರು. ಆದರೆ 8 ವರ್ಷ ಸೇವೆ ಸಲ್ಲಿಸಿದ ನನ್ನನ್ನು ಕೈ ಬಿಡುವಾಗ ಆರ್ ಸಿಬಿ ಕಡೆಯಿಂದ ಒಂದು ಫೋನ್ ಕರೆ ಕೂಡಾ ಬರಲಿಲ್ಲ. ಆದರೆ ಆರ್ ಸಿಬಿ, ಇಲ್ಲಿನ ಅಭಿಮಾನಿಗಳು ನನಗೆ ಯಾವತ್ತಿಗೂ ವಿಶೇಷ ಎಂದಿದ್ದಾರೆ.