ಟ್ವಿಟರ್ ನಲ್ಲಿ ತನ್ನ ಭಾವಿ ಪತಿಯನ್ನು ಪರಿಚಯಿಸಿಕೊಟ್ಟ ರಾಧಿಕಾ

ಬುಧವಾರ, 17 ಆಗಸ್ಟ್ 2016 (10:05 IST)
ಬಹು ದಿನಗಳಿಂದ ಸ್ಯಾಂಡಲ್ ವುಡ್ ಮಂದಿ ಹಾಗೇ ಅಭಿಮಾನಿಗಳ ಮನಸ್ಸಿನಲ್ಲಿ  ಪ್ರಶ್ನೆಯೊಂದು ಕಾಡುತ್ತಲೇ ಇತ್ತು. ಅದೇನಪ್ಪಾ ಅಂದ್ರೆ ಯಶ್ ಹಾಗೂ ರಾಧಿಕಾ ನಡುವೆ ಸಂಥಿಂಗ್ ಸಂಥಿಂಗ್ ಇದೆಯಾ ಅಂತಾ. ಆದ್ರೆ ಈ ಕಿಲಾಡಿ ಜೋಡಿ ಮಾತ್ರ ಈ ಬಗ್ಗೆ ತುಟಿ ಪಿಟಿಕ್ ಅಂದಿರಲಿಲ್ಲ.ಆದ್ರೀಗ ಸಡ್ಡನ್ ಆಗಿ ಎಂಗೇಜ್ ಮೆಂಟ್ ಮಾಡಿಕೊಂಡು ಅಭಿಮಾನಿಗಳಿಗೆ ಸಂಪ್ರೈಸ್ ಕೊಟ್ಟಿದೆ.
 

ಇನ್ನು ರಾಧಿಕಾ ಹಾಗೂ ಯಶ್ ಹೇಳದೆ ಎಂಗೇಜ್ ಮೆಂಟ್ ಮಾಡಿಕೊಂಡ್ರು ಅಂತಾ ಅನೇಕರು ಬೇಜಾರು ಮಾಡಿಕೊಂಡಿದ್ರು. ಅದಕ್ಕೆಂದೇ ನಿನ್ನೆ ಇಬ್ಬರೂ ಸೇರಿ ಪ್ರೆಸ್ ಮೀಟ್ ಮಾಡಿದ್ರು ಇಷ್ಟೇ ಯಾಕೆ ರಾಧಿಕಾ ಅವರು ಟ್ವಿಟರ್ ಮೂಲಕವೂ ಅಭಿಮಾನಿಗಳಿಗೆ ತನ್ನ ಹೀರೋ ನನ್ನು ಪರಿಚಯಿಸಿದ್ದಾರೆ.

ಇದುವೆರೆಗೂ ಈವರೆಗೂ ತಮ್ಮ ಲವ್ ಬಗ್ಗೆ ಎಲ್ಲೂ ಹೇಳದೇ ಮುಚ್ಚಿಟ್ಟಿದ ರಾಧಿಕಾ ಇದೀಗ ಟ್ವಿಟ್ಟರ್‌ ಮೂಲಕ ತಮ್ಮ ಸಂಬಂಧವನ್ನು ಜಗತ್ತಿಗೆ ಸಾರಿ ಹೇಳಿದ್ದಾರೆ. ರಾಧಿಕಾ ಪಂಡಿತ್‌ ತನ್ನ ಟ್ವಿಟ್ಟರ್‌ನಲ್ಲಿ ಎಂಗೇಜ್‌ಮೆಂಟ್‌ ಫೋಟೋ ಹಾಕಿ ನನ್ನ ಹೀರೋ, ಭಾವಿ ಪತಿಯನ್ನು ಪರಿಚಯಿಸುತ್ತಿದ್ದೇನೆ ಅಂತಾ ಪೋಸ್ಟ್‌ ಮಾಡಿದ್ದಾರೆ. 

ಆ ಮೂಲಕ ನಾವಿಬ್ಬರು ಎಂಗೇಜ್ಡ್ ಅಂತಾ ಜಗತ್ತಿಗೆ ಸಾರಿ ಹೇಳಿದ್ದಾರೆ ರಾದಿಕಾ ಹಾಗೂ ಯಶ್. ಇವರಿಬ್ಬರ ಜೋಡಿ ನೋಡಿದ ಅಭಿಮಾನಿಗಳಂತೂ ಫುಲ್ ಖುಷಿಯಾಗಿದ್ದಾರೆ. ಇದೇ ರೀತಿ ಈ ಮುದ್ದಾದ ಜೋಡಿ ಮುಂದೆಯೇ ಒಳ್ಳೊಳ್ಳೆ ಸಿನಿಮಾಗಳನ್ನು ಕೊಡಲಿ ಅನ್ನೋದು ಅಭಿಮಾನಿಗಳ ಹಾರೈಕೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 
 

ವೆಬ್ದುನಿಯಾವನ್ನು ಓದಿ