ಕತ್ರೀನಾಗಾಗಿ ಪಾರ್ಟಿಗೆ ಹೋಗಲ್ಲವಂತೆ ರಣ್ ಬೀರ್ ಕಪೂರ್

ಶನಿವಾರ, 25 ಜೂನ್ 2016 (09:48 IST)
ಕತ್ರೀನಾ ಕೈಫ್ ಹಾಗೂ  ರಣ್‌ಬೀರ್ ಕಪೂರ್ ಅವರು ದೂರವಾಗಿದ್ದೇ ತಡ ಇವರಿಬ್ಬರು ಪರಸ್ಪರ ಮುಖ ನೋಡಿಕೊಳ್ಳೋದಕ್ಕೂ ಹಿಂದೇಟು ಹಾಕುತ್ತಿದ್ದಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಜಗ್ಗ ಜಾಸೂಸ್ ಸಿನಿಮಾದಲ್ಲಿ ಅವರಿಬ್ಬರು ಜೊತೆಯಾಗಿ ಅಭಿನಯಿಸಿದ್ದರೂ ಅವರಿಬ್ಬರು ಮುಖ ಮುಖಾಮುಖಿಯಾಗಿ ಮಾತನಾಡಿಕೊಳ್ಳುತ್ತಿರಲಿಲ್ಲ.
ಇದೀಗ ಪಾರ್ಟಿಗಳಲ್ಲೂ ರಣ್‌ಬೀರ್ ಕಪೂರ್ ಹಾಗೂ ಕತ್ರೀನಾ ಕೈಫ್ ಅವರು ಪರಸ್ಪರ ಜೊತೆಯಾಗಿ ಕಾಣಿಸಿಕೊಳ್ಳೋದಕ್ಕೆ ಇಷ್ಟಪಡೋದಿಲ್ಲ ಅನ್ನೋದು ಸಾಬೀತಾಗಿದೆ.ಅದೇನಪ್ಪಾ ಅಂದ್ರೆ  ನಿರ್ದೇಶಕ ಮನಮೋಹನ್ ಶೆಟ್ಟಿ ಅವರ ಪುತ್ರಿ ಆರತಿ ಶೆಟ್ಟಿ ಅವರು ತಮ್ಮ ಮನೆಯಲ್ಲಿ ಇತ್ತೀಚೆಗೆ ಪಾರ್ಟಿಯೊಂದನ್ನು ಆಯೋಜಿಸಿದ್ದರು. ಅದಕ್ಕೆ ಕತ್ರೀನಾ ಹಾಗೂ ರಣ್ ಬೀರ್ ಅವರಿಗೂ ಆಮಂತ್ರಣ ನೀಡಿದ್ದರು.ಆದ್ರೆ ಕ್ಯಾಟ್ ಪಾರ್ಟಿಯಲ್ಲಿ ಭಾಗಿಯಾಗಿದ್ರೆ ರಣ್‌ಬೀರ್ ಅವರು ಮಾತ್ರ ಪಾರ್ಟಿಗೆ ಗೈರಾಗಿದ್ದರು. ಅದು ಯಾಕಪ್ಪಾ ಅಂದ್ರೆ ಪಾರ್ಟಿಯಲ್ಲಿ ಕತ್ರೀನಾ ಕೈಫ್ ಅವರು ಇರುತ್ತಾರೆ ಅಂತಾನೇ ರಣ್‌ಬೀರ್  ಕಪೂರ್ ಅವರು ಪಾರ್ಟಿಯಲ್ಲಿ ಭಾಗವಹಿಸಿಲ್ಲವಂತೆ.
 
ಇನ್ನು ಏಪ್ರಿಲ್ 4 ರಂದು ಕೂಡ ಆರತಿ ಶೆಟ್ಟಿ ಅವರು ಒಂದು ಪಾರ್ಟಿಯನ್ನು ಹಮ್ಮಿಕೊಂಡಿದ್ದರು.ಅದರಲ್ಲಿ ಕ್ಯಾಟ್ ಹಾಗೂ ರಣ್ ಬೀರ್ ಇಬ್ಬರೂ ಕೂಡ ಭಾಗಿಯಾಗಿದ್ದರು.ಆದ್ರೆ ಇಬ್ಬರೂ ಕೂಡ ಮುಖ ನೋಡಿಕೊಳ್ಳೋಕೆ ಇಷ್ಟಪಡಲಿಲ್ಲ. ಈ ಬಾರಿಯ ಪಾರ್ಟಿಯಲ್ಲಿ ಕ್ಯಾಟ್ ಭಾಗವಹಿಸಿದ್ರೂ ಆದ್ರೆ ಅವರು ಮಾತ್ರ ಪಾರ್ಟಿಯನ್ನು ತುಂಬಾನೇ ಎಂಜಾಯ್ ಮಾಡಿದ್ರಂತೆ. ಅವರಿಗೆ ಆಲಿಯಾ ಭಟ್ ಸಾಥ್ ನೀಡಿದ್ರಂತೆ. ಕ್ಯಾಟ್ ಅವರನ್ನು ನೋಡಿದ್ರೆ ಅವರು ಸ್ವಲ್ಪಾನೂ ರಣ್‌ಬೀರ್  ಅವರನ್ನು ಮಿಸ್  ಮಾಡಿಕೊಳ್ಳುತ್ತಿಲ್ಲ ಅನ್ನೋದು ಕನ್ಫರ್ಮ್ ಅಂತಿದ್ದಾರೆ ಬಾಲಿವುಡ್ ಮಂದಿ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ