ಕರೀನಾ ಕಪೂರ್ ಪ್ರೆಗ್ನೆಂಟ್ ಬಗ್ಗೆ ರಣಧೀರ್ ಕಪೂರ್ ಹೇಳಿದ್ದೇನು?

ಗುರುವಾರ, 2 ಜೂನ್ 2016 (14:16 IST)
ಕರೀನಾ ಕಪೂರ್ ತಾಯಿಯಾಗುತ್ತಿದ್ದಾಳೆ ಎಂಬ ವದಂತಿ ಬಗ್ಗೆ ಕರೀನಾ ಕಪೂರ್ ತಂದೆ ಪ್ರತಿಕ್ರಿಯೆ ನೀಡಿದ್ದಾರೆ. ಕರೀನಾ ತಾಯಿಯಾಗುತ್ತಿದ್ದಾಳೆ ಎಂಬುವುದರ ಕುರಿತು ಕರೀನಾ ಹಾಗೂ ಸೈಫ್ ತಿಳಿಸಿಲ್ಲ, ಈ ಬಗ್ಗೆ ಯಾವುದೇ ಸುಳಿವು ಇಲ್ಲ. ಆದ್ರೆ ಕರೀನಾ ತಾಯಿಯಾಗುತ್ತಿದ್ದಾಳೆ ಎಂಬುದು ನಿಜವಾಗಲಿ ಎಂದು ಆಶಿಸುತ್ತೇನೆ ಎಂದು ರಣಧೀರ್ ಕಪೂರ್ ತಿಳಿಸಿದ್ದಾರೆ. 
 
ಇನ್ನೂ ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಮೊದಲನೆಯ ಬೇಬಿಗಾಗಿ ಕಾಯುತ್ತಿದ್ದಾರೆ ಎಂದು ಹೇಳಲಾಗ್ತಿತ್ತು.. ಆದ್ರೆ ಮೂಲಗಳ ಪ್ರಕಾರ  ಕರೀನಾ ಕಪೂರ್ ಪ್ರೆಗ್ನೆಂಟ್ ಎಂದು ಹೇಳಲಾಗ್ತಿತ್ತು. ಬೆಬೋ ಮೂರು ತಿಂಗಳ ಪ್ರೆಗ್ನೆಂಟ್ ಎನ್ನಲಾಗುತ್ತಿದೆ.
 
ಇತ್ತೀಚೆಗೆ ಲಂಡನ್‌ನಲ್ಲಿ ವೇಕೆಷನ್ ಮುಗಿಸಿದ್ದ ದಂಪತಿ ಕೆಲ ದಿನಗಳ ವರೆಗೆ ಲಂಡನ್‌ನಲ್ಲಿ ವಿಶ್ರಾಂತಿ ಪಡೆಯಲು ತೆರಳಿದ್ದರು.
 
ಸೈಫ್ ಅಲಿ ಖಾನ್ ಹಾಗೂ ರಾಜ ಕುಂದ್ರಾ ಜತೆಗೂಡಿ ಚಿತ್ರ ನಿರ್ಮಾಣ ಮಾಡುವ ಪ್ಲ್ಯಾನ್ ನಲ್ಲಿದ್ದಾರೆ. ಇತ್ತೀಚೆಗೆ ಶಿಲ್ಪಾ ಶೆಟ್ಟಿ ಮನೆಗೆ ಕರೀನಾ ಕಪೂರ್ ಹಾಗೂ ಸೈಫ್ ಅಲಿ ಖಾನ್ ಭೇಟಿ ನೀಡಿದ್ದರು. ಈ ವೇಳೆ ಇಬ್ಬರು ಚರ್ಚೆ ನಡೆಸಿದ್ದಾರಂತೆ. ಇನ್ನೂ ಶಾಹಿದ್ ಕಪೂರ್ , ಕಂಗನಾ ಜತೆಗೆ ಸೈಫ್ ಅಲಿ ಖಾನ್ 'ರಂಗೂನ್ 'ಚಿತ್ರದಲ್ಲಿ ನಟಿಸುತ್ತಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ