ಟಾಪ್ ಮ್ಯೂಸಿಕ್ ಕೆಟಗರಿಯಲ್ಲಿ ಸ್ಥಾನ ಪಡೆದ ಬ್ಯಾಂಗಲ್ ಬಂಗಾರಿ, ಯುವ ಸ್ಟೆಪ್ಸ್‌ಗೆ ಫ್ಯಾನ್ಸ್ ಫಿದಾ

Sampriya

ಮಂಗಳವಾರ, 1 ಜುಲೈ 2025 (18:54 IST)
Photo Credit X
ನಟ ಯುವರಾಜ್‌ಕುಮಾರ್ ನಟನೆಯ ಬ್ಯಾಂಗಲ್ ಬಂಗಾರಿ ಸಿನಿಮಾ ಹಾಡು ಇದೀಗ ಟ್ರೆಂಡಿಗ್‌ನಲ್ಲಿದೆ. ಈ ಗೀತೆ ಎಲ್ಲೆಡೆ ವೈರಲ್ ಆಗಿದ್ದು, ಅನೇಕ ಸೆಲೆಬ್ರಿಟಿಗಳು ಈ ಹಾಡಿನ ರೀಲ್ಸ್‌ಗೆ ಸ್ಟೆಪ್ ಹಾಕಿದ್ದಾರೆ.  ನಾಯಕ ಯುವರಾಜ್ ಕುಮಾರ್ ಹಾಗೂ ನಾಯಕಿ ಸಂಜನಾ ಆನಂದ್ ಬ್ಯಾಂಗಲ್ ಬಂಗಾರಿ ಅಂತಾ ಕುಣಿದು ಕುಪ್ಪಳಿಸಿದ್ದರು.

ನಾಗಾರ್ಜುನ್ ಶರ್ಮಾ ಸಾಹಿತ್ಯ ಬರೆದ ಪದಕ್ಕೆ  ಆಂತೋನಿ ದಾಸ್ ಹಾಡಿದ್ದಾರೆ. ಚರಣ್ ರಾಜ್ ಸಂಗೀತ, ಯುವ-ಸಂಜನಾ ಕುಣಿದ ಬಂಗಾಲ್ ಬಂಗಾರಿ ಗೀತೆ ಸಖತ್ ಹಿಟ್ ಕಂಡಿದೆ. ಕೇವಲ 22 ದಿನಗಳಲ್ಲಿ ಬರೋಬ್ಬರಿ 10 ಮಿಲಿಯನ್ ವೀಕ್ಷಣೆ ಕಂಡಿರುವ ಹಾಡು, ಟಾಪ್ ಮ್ಯೂಸಿಕ್ ವಿಡಿಯೋ ಕೆಟಗರಿಯಲ್ಲಿ 29ನೇ ಸ್ಥಾನವನ್ನು ಪಡೆದುಕೊಂಡಿದೆ. ಅತಿ ಕಡಿಮೆ ಸಮಯದಲ್ಲಿ ಬ್ಯಾಂಗಲ್ ಬಂಗಾರಿ ದಾಖಲೆ ಬರೆದಿದ್ದು, ಸಿನಿಮಾ ಇದೀಗ ಭಾರೀ ನಿರೀಕ್ಷೆಯನ್ನು ಮೂಡಿಸಿದೆ. ‌

ಎಕ್ಕ ಚಿತ್ರಕ್ಕೆ ರೋಹಿತ್ ಪದಕಿ ನಿರ್ದೇಶನ ಮಾಡಿದ್ದಾರೆ. ಚರಣ್ ರಾಜ್ ಸಂಗೀತದ ಮೋಡಿ ಇಡೀ ಚಿತ್ರಕ್ಕಿದೆ. ಅಶ್ವಿನಿ ಪುನೀತ್ ರಾಜ್‌ಕುಮಾರ್, ಜಯಣ್ಣ, ಕಾರ್ತಿಕ್ ಗೌಡ ಒಟ್ಟಿಗೆ ಸೇರಿ ಈ ಚಿತ್ರವನ್ನ ನಿರ್ಮಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ