ಕಿಚ್ಚ ಸುದೀಪ್ ಬಿಗ್ ಬಾಸ್ ಬಿಡೋದು, ಧೋನಿ ಸಿಎಸ್ ಕೆ ಬಿಡೋದು ಎರಡೂ ಒಂದೇ

Krishnaveni K

ಮಂಗಳವಾರ, 1 ಜುಲೈ 2025 (12:12 IST)
ಬೆಂಗಳೂರು: ಬಿಗ್ ಬಾಸ್ ನಿರೂಪಣೆ ಮಾಡಲ್ಲ ಎಂದಿದ್ದ ಕಿಚ್ಚ ಸುದೀಪ್ ಇದೀಗ ಮತ್ತೆ ನಾಲ್ಕು ಸೀಸನ್ ಗೆ ಸಹಿ ಹಾಕಿದ ಬೆನ್ನಲ್ಲೇ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಸುದೀಪ್ ಬಿಗ್ ಬಾಸ್ ಬಿಡೋದೂ ಒಂದೇ ಧೋನಿ ಸಿಎಸ್ ಕೆ ಪರ ಆಡುವುದು ನಿಲ್ಲಿಸುವುದೂ ಒಂದೇ ಎಂದು ಟ್ರೋಲ್ ಮಾಡಿದ್ದಾರೆ.

ಧೋನಿ ಕೂಡಾ ವಯಸ್ಸು 42 ದಾಟಿದರೂ ಇನ್ನೂ ಸಿಎಸ್ ಕೆ ಪರ ಐಪಿಎಲ್ ಆಡುವುದು ಮಾತ್ರ ಬಿಟ್ಟಿಲ್ಲ. ಪ್ರತೀ ಬಾರಿ ಐಪಿಎಲ್ ಆರಂಭವಾದಾಗಲೂ ಇದೇ ಧೋನಿಯ ಕೊನೆಯ ಐಪಿಎಲ್ ಆಗಿರಬಹುದು ಎಂದು ಜನ ಮಾತನಾಡಿಕೊಳ್ಳುತ್ತಾರೆ. ಆದರೆ ಧೋನಿ ಮಾತ್ರ ಇನ್ನೊಂದು ಮತ್ತೊಂದು ಎಂದು ಮುಂದುವರಿಯುತ್ತಲೇ ಇದ್ದಾರೆ. ಈ ಬಾರಿಯೂ ಅವರು ಇನ್ನೂ ನಿವೃತ್ತಿ ಹೇಳಿಲ್ಲ.

ಇದೀಗ ಸುದೀಪ್ ಕೂಡಾ ಹಾಗೆಯೇ ಎಂದು ಫ್ಯಾನ್ಸ್ ಟ್ರೋಲ್ ಮಾಡಿದ್ದಾರೆ. ಸುದೀಪ್ ಬಿಗ್ ಬಾಸ್ ಕನ್ನಡ ಸೀಸನ್ 1 ರಿಂದಲೂ ನಿರೂಪಕರಾಗಿದ್ದಾರೆ. ಇಷ್ಟು ಸುದೀರ್ಘ ಅವಧಿಯವರೆಗೆ ಯಾವ ಭಾಷೆಯ ನಿರೂಪಕರೂ ನಿರೂಪಣೆ ಮಾಡಿಲ್ಲ. ಅದು ಕಿಚ್ಚನ ಗತ್ತು.

ಕಳೆದ ಬಾರಿ ಸುದೀಪ್ ಇನ್ನು ನಿರೂಪಣೆ ಮಾಡಲ್ಲ ಎಂದಾಗ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಆದರೆ ಈಗ ಮತ್ತೆ ಕಲರ್ಸ್ ವಾಹಿನಿ ಅವರನ್ನೇ ಕರೆತಂದಿದೆ. ಕಿಚ್ಚ ಇಲ್ಲದೇ ಬಿಗ್ ಬಾಸ್ ಇಲ್ಲ ಎಂದಿದೆ. ಇದಕ್ಕೇ ಈಗ ಫ್ಯಾನ್ಸ್ ಧೋನಿ ಸಿಎಸ್ ಕೆ ಬಿಡೋದು, ಸುದೀಪ್ ಬಿಗ್ ಬಾಸ್ ಬಿಡೋದು ಎರಡೂ ಒಂದೇ ಎಂದು ತಮಾಷೆ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ