ಬೆಂಗಳೂರು: ಅಮೃತಧಾರೆ ಧಾರವಾಹಿಯಲ್ಲಿ ಈಗ ಹೀರೋಯಿನ್ ಭೂಮಿಕಾ ತುಂಬು ಗರ್ಭಿಣಿ. ಬ್ಯುಸಿನೆಸ್ ಮ್ಯಾನ್ ಗೌತಮ್ ದಿವಾನ್ ಹೆಂಡತಿ ಭೂಮಿಕಾ ಡೆಲಿವರಿ ಮಾಡಿಸೋದು ಇದೇ ಡಾಕ್ಟರ್ ಅಂತಿದ್ದಾರೆ ಈಗ ವೀಕ್ಷಕರು.
ಜೀ ಕನ್ನಡದಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿ ಅಮೃತಧಾರೆ ಈಗ ಕುತೂಹಲಕಾರಿ ಘಟ್ಟಕ್ಕೆ ತಲುಪಿದೆ. ಗೌತಮ್ ತಮ್ಮ ಜೈದೇವ್ ಮೋಸ ಬಯಲಾಗಿದ್ದು, ಎರಡನೇ ಮದುವೆ ಮಾಡಿಕೊಂಡು ಮನೆ ಬಿಟ್ಟು ಹೋಗಿದ್ದಾನೆ. ಇತ್ತ ಮಲ್ಲಿ ಜೀವನ ಅತಂತ್ರವಾಗಿದೆ. ನನ್ನ ಕೈಯಾರೆ ಮಗಳ ಜೀವನ ಹಾಳು ಮಾಡಿದೆನಲ್ಲಾ ಎಂದು ಭೂಪತಿ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇತ್ತ ತನ್ನ ತಮ್ಮ, ಮಗ ಇಬ್ಬರನ್ನೂ ದೂರ ಮಾಡಿದ ಭೂಮಿಕಾನ ಸುಮ್ನೇ ಬಿಡಲ್ಲ ಎಂದು ಶಕುಂತಲಾ ಪಣ ತೊಟ್ಟಿದ್ದಾಳೆ.
ಆದರೆ ಎಲ್ಲರ ಕಣ್ಣು ಈಗ ಇರೋದು ಭೂಮಿಕಾ ಮಗು ಮೇಲೆ. ಸಾಮಾನ್ಯವಾಗಿ ಯಾವ ಧಾರವಾಹಿಯಲ್ಲೂ ಹೀರೋಯಿನ್ ಮಗು ಹೆರಲ್ಲ. ಗರ್ಭಿಣಿಯಾದ ಬಳಿಕ ಏನೋ ಕಾರಣಕ್ಕೆ ಗರ್ಭಪಾತವಾಗಿಬಿಡುತ್ತದೆ. ಆದರೆ ಇಲ್ಲಿ ಭೂಮಿಕಾ ತುಂಬು ಗರ್ಭಿಣಿಯಾಗಿದ್ದು ಸದ್ಯದಲ್ಲೇ ಮಗು ಹಡೆಯಲಿದ್ದಾಳೆ.
ಆದರೆ ಭೂಮಿಕಾಗೆ ಡೆಲಿವರಿ ಮಾಡಿಸೋದು ಮಾತ್ರ ಡಾಕ್ಟರ್ ಕರ್ಣ ಎನ್ನುತ್ತಿದ್ದಾರೆ ವೀಕ್ಷಕರು. ಜೀ ವಾಹಿನಿಯಲ್ಲಿ ಸದ್ಯದಲ್ಲೇ ಡಾಕ್ಟರ್ ಕರ್ಣ ಧಾರವಾಹಿ ಪ್ರಸಾರವಾಗಲಿದೆ. ಕಿರುತೆರೆಯ ಖ್ಯಾತ ನಟ ಕಿರಣ್ ರಾಜ್ ಸ್ತ್ರೀರೋಗ ತಜ್ಞರಾಗಿ ಈ ಧಾರವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ. ಇದೀಗ ಡಾಕ್ಟರ್ ಕರ್ಣ ಅಮೃತಧಾರೆ ಭೂಮಿಕಾ ಡೆಲಿವರಿ ಮಾಡಿಸುವ ಮೂಲಕವೇ ಜೀ ಪ್ರೇಕ್ಷಕರ ಮುಂದೆ ಬರಲಿದ್ದಾರೆ ನೋಡಿ ಅಂತಿದ್ದಾರೆ ಫ್ಯಾನ್ಸ್.