ರಣವೀರ್ ಸಿಂಗ್ ಗೆ ಜಿರಳೆಯಾಗುವ ಆಸೆಯಾಗಿದ್ದೇಕೆ ಗೊತ್ತಾ?!

ಭಾನುವಾರ, 6 ಜನವರಿ 2019 (08:47 IST)
ಮುಂಬೈ: ಸಿಂಬ ಸಿನಿಮಾದ ಯಶಸ್ಸಿನಲ್ಲಿರುವ ರಣವೀರ್ ಸಿಂಗ್ ಗೆ ಜಿರಳೆಯಾಗುವ ಬಯಕೆಯಾಗಿದೆಯಂತೆ! ಅದೇನು ಎಲ್ಲಾ ಬಿಟ್ಟು ಪ್ರಾಣಿಯಾಗುವ ಆಸೆಯಾಗಿದ್ದೇಕೆ ಎಂದು ನೀವು ಕೇಳಬಹುದು.


ಸಂದರ್ಶನವೊಂದರಲ್ಲಿ ದೀಪಿಕಾ ಪತಿ ರಣವೀರ್ ಗೆ ಒಂದು ವೇಳೆ ನೀವು ಯಾವುದಾದರೂ ಪ್ರಾಣಿಯಾಗುವುದಿದ್ದರೆ ಯಾವ ಪ್ರಾಣಿಯಾಗಲು ಬಯಸುತ್ತೀರಿ ಎಂದು ಪ್ರಶ್ನೆ ಕೇಳಲಾಯಿತು. ಸಾಮಾನ್ಯವಾಗಿ ಈ ಪ್ರಶ್ನೆಗೆ ಎಲ್ಲರೂ ಸುಂದರವಾದ ಪ್ರಾಣಿಯ ಹೆಸರು ಹೇಳುತ್ತಾರೆ.

ಆದರೆ ರಣವೀರ್ ಮಾತ್ರ ಜಿರಳೆ ಎಂದಿದ್ದಾರೆ. ಅದಕ್ಕೆ ಅವರು ನೀಡಿದ ಕಾರಣ ಇನ್ನೂ ಇಂಟರೆಸ್ಟಿಂಗ್ ಆಗಿದೆ. ಜಿರಳೆ ಯಾವುದೇ ಹವಾಗುಣದಲ್ಲೂ ಬದುಕಬಹುದು. ಅದರ ಮೇಲೆ ನ್ಯೂಕ್ಲಿಯರ್ ಬಾಂಬ್ ಬಿದ್ದರೂ ಬದುಕುಳಿಯುತ್ತದೆ. ಹೀಗಾಗಿ ನಾನು ಜಿರಳೆಯಾಗಲು ಬಯಸುತ್ತೇನೆ ಎಂದಿದ್ದಾರೆ ರಣವೀರ್!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ