ಕರಣ್ ಜೋಹರ್ ಬರ್ತ್ ಡೇ ಪಾರ್ಟಿಯಲ್ಲಿ ಕಿರಿ ಕಿರಿಗೊಳಗಾದ ಕಿರಿಕ್ ಬೆಡಗಿ ರಶ್ಮಿಕಾ ಮಂದಣ್ಣ

ಗುರುವಾರ, 26 ಮೇ 2022 (16:26 IST)
ಮುಂಬೈ: ನಿನ್ನೆ ರಾತ್ರಿ ಬಾಲಿವುಡ್ ಖ್ಯಾತ ನಿರ್ಮಾಪಕ ಕರಣ್ ಜೋಹರ್ ತಮ್ಮ 50 ನೇ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಈ ಬರ್ತ್ ಡೇ ಪಾರ್ಟಿಗೆ ಘಟಾನುಘಟಿಗಳೆಲ್ಲಾ ಆಗಮಿಸಿದ್ದರು.

ಈ ಪೈಕಿ ರಶ್ಮಿಕಾ ಮಂದಣ್ಣ, ವಿಜಯ್ ದೇವರಕೊಂಡ ಕೂಡಾ ಸೇರಿದ್ದರು. ಆದರೆ ಪಾರ್ಟಿಗೆ ಬಂದಿದ್ದ ರಶ್ಮಿಕಾ ತಮ್ಮ ಡ್ರೆಸ್ ನಿಂದಾಗಿ ಕಿರಿ ಕಿರಿಗೊಳಗಾದಂತೆ ಕಂಡುಬಂದರು. ತೊಡೆ ಕಾಣುವಂತೆ ಕಪ್ಪು ಗೌನ್ ತೊಟ್ಟುಕೊಂಡಿದ್ದ ರಶ‍್ಮಿಕಾ ಫೋಟೋಗ್ರಾಫರ್ ಗಳ ಮುಂದೆ ಪೋಸ್ ಕೊಡುವಾಗ ಕೊಂಚ ಇರಿಸುಮುರಿಸು ಅನುಭವಿಸಿದರು.

ಇದನ್ನು ಗಮನಿಸಿದ ನೆಟ್ಟಿಗರು ತಮಗೆ ಆ ಡ್ರೆಸ್ ಸರಿಹೊಂದುತ್ತಿಲ್ಲ ಎಂದರೆ ರಶ್ಮಿಕಾ ಯಾಕೆ ಅದನ್ನು ತೊಟ್ಟುಕೊಂಡರು? ಆಕೆಗೆ ಈ ಡ್ರೆಸ್ ಕಂಫರ್ಟೇಬಲ್ ಆಗಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ