ಅನಿಮಲ್ ನಲ್ಲಿ ರಶ್ಮಿಕಾ ಮಂದಣ್ಣ ಹಾಟ್ ದೃಶ್ಯಗಳು ಆನ್ ಲೈನ್ ನಲ್ಲಿ ಲೀಕ್

ಶನಿವಾರ, 2 ಡಿಸೆಂಬರ್ 2023 (17:33 IST)
ಮುಂಬೈ: ಅನಿಮಲ್ ಸಿನಿಮಾದಲ್ಲಿ ನಾಯಕ ರಣಬೀರ್ ಕಪೂರ್ ಜೊತೆ ನಟಿ ರಶ್ಮಿಕಾ ಮಂದಣ್ಣ ಸಾಕಷ್ಟು ಬೋಲ್ಡ್ ಸೀನ್ ಗಳಲ್ಲಿ ಅಭಿನಯಿಸಿದ್ದಾರೆ.

ಕೇವಲ ಲಿಪ್ ಲಾಕ್ ಮಾತ್ರವಲ್ಲ ಈ ಸಿನಿಮಾದಲ್ಲಿ ರಶ್ಮಿಕಾ-ರಣಬೀರ್ ನಡುವೆ ಸಾಕಷ್ಟು ಇಂಟಿಮೇಟ್ ದೃಶ್ಯಗಳಿವೆ. ಬೆಡ್ ರೂಂ ದೃಶ್ಯಗಳಲ್ಲಿ ರಶ್ಮಿಕಾ ಮೈ ಚಳಿ ಬಿಟ್ಟು ಅಭಿನಯಿಸಿದ್ದಾರೆ.

ಅವರ ಈ ದೃಶ್ಯಗಳು ಪಡ್ಡೆ ಹೈಕಳು ಕಣ್ಣುಬಿಟ್ಟು ನೋಡುವಂತೆ ಮಾಡಿದೆ. ನಿರ್ದೇಶಕ ಸಂದೀಪ್ ರೆಡ್ಡಿ ಈ ಮೊದಲು ಅರ್ಜುನ್ ರೆಡ್ಡಿ ಸಿನಿಮಾದಲ್ಲೂ ಇಂತಹ ಬೋಲ್ಡ್ ದೃಶ್ಯಗಳನ್ನು ತೋರಿಸಿದ್ದರು. ಇಲ್ಲೂ ಅದು ರಿಪೀಟ್ ಆಗಿದೆ.

ರಶ್ಮಿಕಾರ ಈ ಇಂಟಿಮೇಟ್ ದೃಶ್ಯಗಳು ಈಗ ಆನ್ ಲೈನ್ ನಲ್ಲಿ ಸೋರಿಕೆಯಾಗುತ್ತಿದೆ. ಅನೇಕ ವಿಡಿಯೋ ಲಿಂಕ್ ಗಳನ್ನು ಎಕ್ಸ್ ಖಾತೆ ದಿಸೇಬಲ್ ಮಾಡಿದೆ. ಹಾಗಿದ್ದರೂ ಕೆಲವು ದೃಶ್ಯಗಳು ಹರಿದಾಡುತ್ತಿವೆ. ಇದು ಚಿತ್ರತಂಡಕ್ಕೂ ತಲೆನೋವಾಗಿ ಪರಿಣಮಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ