ಸೌತ್ ಹಾಡುಗಳಲ್ಲಿ ಮಸಾಲಾ ಜಾಸ್ತಿ, ರೊಮ್ಯಾಂಟಿಕ್ ಹಾಡಿನಲ್ಲಿ ಬಾಲಿವುಡ್ಡೇ ಸೈ: ರಶ್ಮಿಕಾ ಮಂದಣ್ಣ

ಮಂಗಳವಾರ, 27 ಡಿಸೆಂಬರ್ 2022 (10:40 IST)
Photo Courtesy: Twitter
ಮುಂಬೈ: ಮಿಷನ್ ಮಜ್ನು ಸಿನಿಮಾ ಪ್ರಮೋಷನ್ ನಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ಬಾಲಿವುಡ್ ಮತ್ತು ಸೌತ್ ಭಾಷೆಗಳ ಹಾಡಿನ ನಡುವಿನ ವ್ಯತ್ಯಾಸವೇನೆಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ಮಿಷನ್ ಮಜ್ನು ಸಿನಿಮಾದ ರೊಮ್ಯಾಂಟಿಕ್ ಹಾಡು ಬಿಡುಗಡೆಯಾಗಿತ್ತು. ಈ ಹಾಡಿನ ಬಗ್ಗೆ ಮಾತನಾಡಿರುವ ರಶ್ಮಿಕಾ ದಕ್ಷಿಣದ ಹಾಡುಗಳು ಮತ್ತು ಬಾಲಿವುಡ್ ಹಾಡಿನ ನಡುವಿನ ವ್ಯತ್ಯಾಸವೇನೆಂದು ಹೇಳಿದ್ದಾರೆ.

‘ಹಾಡುಗಳ ವಿಚಾರಕ್ಕೆ ಬಂದರೆ ಬಾಲಿವುಡ್ ಹಾಡುಗಳು ಹೆಚ್ಚು ರೊಮ್ಯಾಂಟಿಕ್. ಸೌತ್ ಹಾಡುಗಳಲ್ಲಿ ಮಾಸ್ ಅಂಶ, ಮಸಾಲಾವೇ ಜಾಸ್ತಿ’ ಎಂದು ರಶ್ಮಿಕಾ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ