ಹಿರಿಯ ನಟ ರಿಷಿ ಕಪೂರ್ ಇನ್ನಿಲ್ಲ

ಗುರುವಾರ, 30 ಏಪ್ರಿಲ್ 2020 (09:52 IST)
ಮುಂಬೈ: ನಟ ಇರ್ಫಾನ್ ಖಾನ್ ನಿಧನದ ಆಘಾತದಿಂದ ಚೇತರಿಸಿಕೊಳ್ಳುವ ಮೊದಲೇ ಬಾಲಿವುಡ್ ಮತ್ತೊಬ್ಬ ಮಹಾನ್ ನಟನ ಅಗಲುವಿಕೆಯ ಆಘಾತಕ್ಕೊಳಗಾಗಿದೆ. ಬಾಲಿವುಡ್ ನಟ ರಿಷಿ ಕಪೂರ್ ಮುಂಬೈನಲ್ಲಿ ನಿಧನರಾಗಿದ್ದಾರೆ.


ಅವರಿಗೆ 67 ವರ್ಷವಾಗಿತ್ತು. 2018 ರಿಂದ ಕ್ಯಾನ್ಸರ್ ನಿಂದ ಬಳಲುತ್ತಿರುವ ರಿಷಿ ಕಪೂರ್ ಅಮೆರಿಕಾದಲ್ಲಿ ಹಲವು ದಿನಗಳ ಕಾಲ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತೀಚೆಗಷ್ಟೇ ಸ್ವದೇಶಕ್ಕೆ ಮರಳಿದ್ದರು.

ನಿನ್ನೆ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ರಿಷಿ ಕಪೂರ್ ಇಂದು ನಿಧನರಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಬಿಗ್ ಬಿ ಅಮಿತಾಭ್ ಬಚ್ಚನ್, ರಿಷಿ ಕಪೂರ್ ಹೋಗಿಬಿಟ್ಟ. ನಾನು ಕುಸಿದು ಹೋಗಿದ್ದೇನೆ ಎಂದು ಬೇಸರಿಂದಲೇ ಟ್ವೀಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ