ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ

ಬುಧವಾರ, 8 ಡಿಸೆಂಬರ್ 2021 (10:27 IST)
ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ಇದೀಗ ತಮ್ಮದೇ ವೃತ್ತಿ ಜೀವನ ಕಂಡುಕೊಳ್ಳುವ ನಿಟ್ಟಿನಲ್ಲಿ ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.

ಜನಪ್ರಿಯ ಪ್ಯಾಶನ್ ಬ್ರ್ಯಾಂಡ್ ಒಂದರೊಂದಿಗೆ ಕೈ ಜೋಡಿಸಿರುವ ಸಾರಾ ಮಾಡೆಲಿಂಗ್ ಕ್ಷೇತ್ರಕ್ಕೆ ಭರ್ಜರಿ ಎಂಟ್ರಿ ಕೊಟ್ಟಿದ್ದಾರೆ. ಪ್ರಮೋಷನಲ್ ವಿಡಿಯೋವೊಂದರಲ್ಲಿ ಸಾರಾ ಕಾಣಿಸಿಕೊಂಡಿದ್ದು ಈ ವಿಡಿಯೋಗಳು ಈಗ ವೈರಲ್ ಆಗಿದೆ.

ಸಾರಾ ಅದ್ಭುತ ಸುಂದರಿ ಎನ್ನುವುದರಲ್ಲಿ ಎರಡು ಮಾತಿಲ್ಲ. ಆಕೆಯ ಹಾಟ್ ಫೋಟೋಗಳನ್ನು ನೋಡಿ ಯಾವ ಸಿನಿಮಾ ನಟಿಗೂ ಕಮ್ಮಿಯಿಲ್ಲ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಾರಾಳನ್ನು ನೆಟ್ಟಿಗನೊಬ್ಬ ಅಪ್ಪನ ದುಡ್ಡಲ್ಲಿ ಮಜಾ ಮಾಡುತ್ತಿರುವುದು ಎಂದು ವ್ಯಂಗ್ಯ ಮಾಡಿದ್ದ. ಇದೀಗ ಎಲ್ಲರೂ ಹುಬ್ಬೇರುವಂತೆ ತನ್ನ ಸ್ವಂತ ಕಾಲ ಮೇಲೆ ನಿಲ್ಲಲು ಸಾರಾ ಮಾಡೆಲಿಂಗ್ ಗೆ ಕಾಲಿಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ