ಕೋರ್ಟ್ ಆವರಣದಲ್ಲೇ ಸಲ್ಮಾನ್ ಖಾನ್ ಅವರಿಗೆ ಧಮ್ಕಿ ಹಾಕಿದ ದರೋಡೆಕೋರ!

ಶನಿವಾರ, 6 ಜನವರಿ 2018 (08:18 IST)
ಜೋಧ್ಪುರ : ಕೃಷ್ಣ ಮೃಗ ಭೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು 2 ದಿನಗಳಿಂದ ವಿಚಾರಣೆಗಾಗಿ ಕೋರ್ಟ್ ಗೆ ಹಾಜರಾಗುತ್ತಿದ್ದು, ಆ ಸಂದರ್ಭದಲ್ಲಿ ಕೋರ್ಟ್ ಆವರಣದಲ್ಲಿ ದರೋಡೆಕೋರ ಲಾರೆನ್ಸ್ ವಿಷ್ಣೋಯ್ ಎಂಬಾತ ಸಲ್ಮಾನ್ ಖಾನ್ ಅವರಿಗೆ ಧಮ್ಕಿ ಹಾಕಿದ ಘಟನೆ ನಡೆದಿದೆ.

 
1998ರಲ್ಲಿ ನಟ ಸಲ್ಮಾನ್ ಖಾನ್ ಅವರು ಕೃಷ್ಣ ಮೃಗವೊಂದನ್ನು ಭೇಟೆಯಾಡಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಜೋಧ್ಪುರ ಕೋರ್ಟ್ ಗೆ ಹಾಜರಾಗುತ್ತಿದ್ದರು. ಆ ವೇಳೆ ಗ್ಯಾಂಗ್ ಸ್ಟಾರ್ ಲಾರೆನ್ಸ್ ಕೂಡ ಕೋರ್ಟ್ ಗೆ ಬಂದಿದ್ದ. ಆತನ ವಿರುದ್ಧ ಸುಲಿಗೆ ಸೇರಿದಂತೆ ಹಲವಾರು  ಕೇಸುಗಳಿದ್ದು, ಬಿಗಿ ಪೊಲೀಸ್ ಭದ್ರತೆಯೊಂದಿಗೆ ದರೋಡೆಕೋರನನ್ನು ಕೋರ್ಟ್ ಗೆ ಕರೆತರಲಾಗಿತ್ತು. ಆ ಸಂದರ್ಭದಲ್ಲಿ ಇಬ್ಬರು ಮುಖಾಮುಖಿಯಾದಾಗ ಲಾರೆನ್ಸ್ ಸಲ್ಮಾನ್ ಖಾನ್ ಅವರಿಗೆ ಬೆದರಿಕೆ ಹಾಕಿದ್ದಾನೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ