'ಟೈಗರ್ ಜಿಂದಾ ಹೈ' ಸಿನಿಮಾಕ್ಕೂ ಪ್ರಧಾನಿ ಮೋದಿಗೂ ಸಂಬಂಧವಿದೆಯಂತೆ ಗೊತ್ತಾ...?

ಶನಿವಾರ, 30 ಡಿಸೆಂಬರ್ 2017 (14:58 IST)
ಮುಂಬೈ: ಸಲ್ಮಾನ್ ಖಾನ್ ನಟನೆಯ ಇತ್ತಿಚೆಗಷ್ಟೆ ಬಿಡುಗಡೆಯಾದ ‘ಟೈಗರ್ ಜಿಂದಾ ಹೈ’ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಭಾರಿ ಸದ್ದು ಮಾಡುತ್ತಿರುವುದು ಎಲ್ಲರಿಗೂ ತಿಳಿದ ವಿಷಯವೇ. ಅದು  ನೈಜ ಕತೆಯನ್ನಾಧರಿಸಿದ ಚಿತ್ರವೆಂದು ನಿರ್ದೇಶಕ  ಅಲಿ ಅಬ್ಬಾಸ್ ಅವರು ಮೊದಲೆ ಹೇಳಿದ್ದು ಈಗ ಈ ಚಿತ್ರಕ್ಕೆ ಸಂಬಂಧಿಸಿದಂತೆ ಒಂದು ಕುತೂಹಲಕಾರಿ ವಿಷಯವನ್ನು ಅವರು ಹೊರಹಾಕಿದ್ದಾರೆ.

 
ಈ ಚಿತ್ರ ಬಿಡುಗಡೆಯಾದ ಮೂರೇ ದಿನದಲ್ಲಿ 100ಕೋಟಿ ರೂ. ಬಾಚಿಕೊಡಿದ್ದು, ಈಗ ಅದರ ಗಳಿಕೆ 206 ಕೋಟಿ ರೂ. ಆಗಿದೆ. ಈ ಸಂದರ್ಭದಲ್ಲಿ ನಿರ್ದೇಶಕ  ಅಲಿ ಅಬ್ಬಾಸ್ ಅವರು ಈ ಚಿತ್ರ ನರೇಂದ್ರ ಮೋದಿಯವರಿಗೆ ಅರ್ಪಿಸಿರುವುದಾಗಿ ಹೇಳಿದ್ದಾರೆ.

 
2014 ರಲ್ಲಿ ಮೋದಿಯವರು ಪ್ರಧಾನಿಯಾದ ಸಂದರ್ಭದಲ್ಲಿ ಇರಾಕ್ ನಲ್ಲಿ ಉಗ್ರರು 45 ಭಾರತೀಯ ನರ್ಸ್ ಗಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಾಗ, ಮೋದಿ ಹಾಗು ವಿದೇಶಾಂಗ ಸಚಿವೆ ಸುಷ್ಮಾಸ್ವರಾಜ್ ಅವರು  ಸಮಸ್ಯೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿ ಯಶಸ್ವಿಯಾಗಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ