ಅಮ್ಮನಿಗಾಗಿ ದುಬಾರಿ ಕಾರು ಖರೀದಿಸಿದ ಸಲ್ಮಾನ್ ಖಾನ್: ಆದರೆ ಮುಂದೇನಾಯ್ತು ಗೊತ್ತಾ?

ಭಾನುವಾರ, 17 ಫೆಬ್ರವರಿ 2019 (09:13 IST)
ಮುಂಬೈ: ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗೆ ಅಮ್ಮ ಸಾಲ್ಮಾ ಎಂದರೆ ಅಚ್ಚುಮೆಚ್ಚು. ಈ ಅಚ್ಚುಮೆಚ್ಚಿನ ಪುತ್ರ ಅಮ್ಮನಿಗಾಗಿ ದುಬಾರಿ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ.


ಅಮ್ಮನಿಗೆ ಓಡಾಡಲು ಅನುಕೂಲವಾಗಲೆಂದು ಸಲ್ಮಾನ್ ಭಾರೀ ಬೆಲೆ ತೆತ್ತು ಎಸ್ ಯುವಿ ಮಾಡೆಲ್ ಕಾರೊಂದನ್ನು ಖರೀದಿ ಮಾಡಿ ಸರ್ಪ್ರೈಸ್ ಆಗಿರಲೆಂದು ಮನೆಯ ಮುಂದೆ ತಂದು ನಿಲ್ಲಿಸಿದ್ದಾರೆ.

ಆದರೆ ಕಾರು ನೋಡಿದ ಸಲ್ಮಾನ್ ಅಮ್ಮ ಮುಖ ಚಿಕ್ಕದು ಮಾಡಿಕೊಂಡಿದ್ದಾರೆ. ಕಾರಣ, ಕಾರು ತೀರಾ ದುಬಾರಿ ಮತ್ತು ದೊಡ್ಡದಾಗಿದೆ. ಇದರಲ್ಲಿ ತನಗೆ ಕಂಫರ್ಟ್ ಆಗಿ ಓಡಾಡಲು ಆಗದು ಎಂದು ಸಾಲ್ಮಾ ಕಾರಿನಲ್ಲಿ ಓಡಾಡಲ್ಲ ಎಂದು ಪುತ್ರನಿಗೆ ಖಡಕ್ ಆಗಿ ಹೇಳಿದ್ದಾರೆ. ಅಲ್ಲಿಗೆ ಸಲ್ಲು ಮಿಯಾ ಕೊಟ್ಟ ಸರ್ಪ್ರೈಸ್ ಗಿಫ್ಟ್ ಠುಸ್ ಆಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ