ನಟ ಸಲ್ಮಾನ್ ಖಾನ್ ಅವರ ಮನೆಯಲ್ಲಿ ರಕ್ಷಾ ಬಂಧನದ ಸಂಭ್ರಮ ಕಳೆಕಟ್ಟಿತ್ತು. ತಮ್ಮ ಪ್ರೀತಿಯ ಸಹೋದರನಿಗೆ ಸಲ್ಲು ಅವರ ಮುದ್ದಿನ ಸಹೋದರಿಯರಾದ ಅರ್ಪಿತಾ ಖಾನ್ ಹಾಗೂ ಅಲ್ವಿರಾ ಖಾನ್ ಅವರು ರಾಖಿಯನ್ನು ಕಟ್ಟಿ ಶುಭ ಕೋರಿದ್ರು. ಇನ್ನು ಅಚ್ಚರಿಯ ವಿಚಾರ ಅಂದ್ರೆ ಸಲ್ಲು ಮನೆಯಲ್ಲಿ ನಡೆದ ರಾಖಿ ಸಂಭ್ರಮದಲ್ಲಿ ಲೂಲಿಯಾ ಕೂಡ ಭಾಗಿಯಾಗಿದ್ದರು. ಅಲ್ಲದೇ ಮಕ್ಕಳ ಸಂಭ್ರಮದಲ್ಲಿ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಹಾಗೂ ಮಲ ತಾಯಿ ಹೆಲೆನ್ ಅವರು ಭಾಗಿಯಾಗಿದ್ರು.