ಸದ್ಯದಲ್ಲೇ ಮದುವೆಯ ಸಂಭ್ರಮದಲ್ಲಿ ತೇಲಾಡಲಿದ್ದಾರಂತೆ ನಟ ಸಲ್ಮಾನ್ ಖಾನ್

ಶನಿವಾರ, 11 ಆಗಸ್ಟ್ 2018 (16:15 IST)
ಮುಂಬೈ : ಬಾಲಿವುಡ್ ನಟ ಸಲ್ಮಾನ್ ಖಾನ್ ಮನೆಯಲ್ಲಿ ಮದುವೆಯ ಕಾರ್ಯಕ್ರಮವೊಂದು ಜರುಗಲಿದೆ ಎಂಬ ವಿಷಯ ಇದೀಗ ಬಾಲಿವುಡ್ ಅಂಗಳದಲ್ಲಿ ಕೇಳಿಬರುತ್ತಿದೆ.

ಹೌದು. ನಟ ಸಲ್ಮಾನ್ ಖಾನ್ ಮನೆಯಲ್ಲಿ ಸದ್ಯದಲ್ಲೇ ಒಂದು ಮದುವೆಯ ಸಮಾರಂಭ ನಡೆಯಲಿದೆಯಂತೆ. ಅಂದ ಮಾತ್ರಕ್ಕೆ ಸಲ್ಮಾನ್ ಖಾನ್ ಹಸೆಮಣೆ ಏರುತ್ತಾರೆ ಎಂದು ಅವರ ಅಭಿಮಾನಿಗಳು ಸಂತಸ ಪಡುವ ಅಗತ್ಯವಿಲ್ಲ. ಯಾಕೆಂದರೆ ಸಲ್ಮಾನ್ ಖಾನ್ ಮನೆಯಲ್ಲಿ ಮದುವೆ ನಡೆಯುಲಿರುವುದು ನಿಜ ಆದರೆ ಅದು ಸಲ್ಮಾನ್ ಖಾನ್ ಅವರದಲ್ಲ ಅವರ ಸಹೋದರ ಅರ್ಬಾಜ್ ಖಾನ್ ಅವರ ವಿವಾಹಮೋತ್ಸವ ನಡೆಯುತ್ತಿದೆ.

 

ನಟ, ನಿರ್ದೇಶಕ ಅರ್ಬಾಜ್ ಖಾನ್ ಮತ್ತು ಮಲೈಕಾ ಆರೋರಾ ಜೊತೆಗಿನ ವಿವಾಹ ವಿಚ್ಛೇದನದ ನಂತರ , ಈಗ ಎರಡನೇ ಮದುವೆಯಾಗುತ್ತಿದ್ದಾರೆ. ಈ ನಿಟ್ಟಿನಲ್ಲಿಜಾರ್ಜಿಯಾ ಇಂದ್ರೇನಿ ಎನ್ನುವ ವಿದೇಶಿ ವಧುವನ್ನು ವರಿಸಲಿದ್ದಾರಂತೆ. ಈಗಾಗಲೇ ಅರ್ಬಾಜ್​ ಕುಟುಂಬದ ಸ್ನೇಹ ಸಂಪಾದಿಸಿರುವ ಜಾರ್ಜಿಯಾಳನ್ನು ಮನೆ ಸೊಸೆಯಾಗಿ ಸಲ್ಲು ಕುಟುಂಬ ಹಸಿರು ನಿಶನೆ ತೋರಿಸಿದೆ ಎಂದು ಬಿಟೌನ್ ಮಾತನಾಡಿಕೊಳ್ಳುತ್ತಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ