ಅಕ್ಕಿ ಅಭಿನಯದ ರುಸ್ತುಮ್ ಚಿತ್ರ ವೀಕ್ಷಿಸುವಂತೆ ಅಭಿಮಾನಿಗಳಿಗೆ ತಿಳಿಸಿದ ಸಲ್ಮಾನ್

ಬುಧವಾರ, 3 ಆಗಸ್ಟ್ 2016 (13:09 IST)
ಅಕ್ಕಿ ಅಭಿನಯದ 'ರುಸ್ತುಮ್' ಚಿತ್ರವು ರಿಲೀಸ್‌ಗೂ ಮುನ್ನವೇ ಎಲ್ಲೆಡೆ ಸದ್ದು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಚಿತ್ರ ನೋಡುವಂತೆ ತಮ್ಮ ಅಭಿಮಾನಿಗಳಿಗೆ ಸಲ್ಮಾನ್ ಖಾನ್ ತಿಳಿಸಿದ್ದಾರೆ. ಅಕ್ಷಯ್ ಪರ ಬ್ಯಾಂಟಿಗ್ ಮಾಡಿರುವ ಸಲ್ಮಾನ್ ,ಚಿತ್ರಮಂದಿರಕ್ಕೆ ತೆರಳಿ ರುಸ್ತುಮ್ ಚಿತ್ರ ವೀಕ್ಷಿಸಿ ಎಂದು ಹೇಳಿದ್ದಾರೆ.

 
ಇದೇ ವೇಳೆ  ಚಿತ್ರರಂಗದಲ್ಲಿ ಅಕ್ಷಯ್ ಕುಮಾರ್ 'ರುಸ್ತುಮ್- ಇ -ಹಿಂದ್' ಇದ್ದಂತೆ ಎಂದು ಸಲ್ಲು ತಿಳಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ 12 ನಿಮಿಷದ ವಿಡಿಯೋವನ್ನು ಸಲ್ಮಾನ್ ಖಾನ್ ಅಪ್‌ಲೋಡ್ ಮಾಡಿದ್ದಾರೆ.

ಶೀಘ್ರದಲ್ಲೇ ರುಸ್ತುಮ್ ಚಿತ್ರ ತೆರೆ ಕಾಣಲಿದ್ದು, ಅಗಸ್ಟ್ 12ರಂದು ಚಿತ್ರ ಬಿಡುಗಡೆಯಾಗಲಿದೆ. ಆದ ಕಾರಣ ಚಿತ್ರಮಂದಿರಕ್ಕೆ ತೆರಳಿ ಚಿತ್ರ ವೀಕ್ಷಿಸುವಂತೆ ಫ್ಯಾನ್ಸ್‌ಗೆ ಸಲ್ಲು ತಿಳಿಸಿದ್ದಾರೆ. 

 
ಈ ಚಿತ್ರದಲ್ಲಿ ಹೊಸ ಅವತಾರದಲ್ಲಿ ಅಕ್ಷಯ್ ಮಿಂಚಿದ್ದಾರೆ. ಸಖತ್ ಹ್ಯಾಂಡ್‌ಸಮ್ ಆಗಿ ಮಿಂಚಿರುವ ಅಕ್ಕಿ ನೌಕಾಸೇನೆಯ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದೇನೆ ಎಂದು ಅಕ್ಷಯ್ ಈ ಹಿಂದೆ ತಮ್ಮ ಪಾತ್ರದ ಬಗ್ಗೆ ಟ್ವಿಟ್ ಮಾಡಿದ್ದರು. ಚಿತ್ರದಲ್ಲಿ ಅಧಿಕಾರಿಯ ಪಾತ್ರದಲ್ಲಿ ಅಕ್ಷಯ್‌‌ರನ್ನು ನೋಡಲು ಅವರ ಅಭಿಮಾನಿಗಳ ಕಾತುರದಲ್ಲಿದ್ದಾರಂತೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 

ವೆಬ್ದುನಿಯಾವನ್ನು ಓದಿ