ಧೋನಿ ಬಗ್ಗೆ ಸುಳ್ಳು ಸುದ್ದಿ: ಕೆಂಡಾಮಂಡಲರಾದ ಪತ್ನಿ ಸಾಕ್ಷಿ ಧೋನಿ

ಶನಿವಾರ, 28 ಮಾರ್ಚ್ 2020 (09:49 IST)
ರಾಂಚಿ: ಕೊರೋನಾವೈರಸ್ ಪರಿಹಾರ ದೇಣಿಗೆಗೆ ಧೋನಿ 1 ಲಕ್ಷ ರೂ. ದೇಣಿಗೆ ನೀಡಿದ್ದಾರೆ ಎಂಬ ಕೆಲವು ಮಾಧ‍್ಯಮಗಳ ಸುದ್ದಿ ಬಗ್ಗೆ ಪತ್ನಿ ಸಾಕ್ಷಿ ಧೋನಿ ಕೆಂಡಾಮಂಡಲರಾಗಿದ್ದಾರೆ.


ಧೋನಿ 1 ಲಕ್ಷ ದೇಣಿಗೆ ನೀಡಿದ್ದಾರೆ ಎಂಬ ಸುದ್ದಿ ಹಬ್ಬುತ್ತಿದ್ದಂತೇ ಹಲವರು ಸಾಮಾಜಿಕ ಜಾಲತಾಣದಲ್ಲಿ ಧೋನಿಯನ್ನು ಟ್ರೋಲ್ ಮಾಡಿದ್ದರು. ಇಷ್ಟು ಕಡಿಮೆ ಮೊತ್ತ ಪರಿಹಾರ ನೀಡಿರುವುದಕ್ಕೆ ಮತ್ತು ಇಷ್ಟು ತಡವಾಗಿ ನೀಡಿದ್ದಕ್ಕೆ ಧೋನಿಯ ಕಾಲೆಳೆದಿದ್ದರು.

ಈ ಬಗ್ಗೆ ಟ್ವೀಟ್ ಮಾಡಿರುವ ಸಾಕ್ಷಿ ‘ಇಂತಹ ಸೂಕ್ಷ್ಮ ಸಮಯದಲ್ಲಿ ಇಂತಹ ಸುಳ್ಳು ಸುದ್ದಿ ಹಬ್ಬಿಸದಂತೆ ಎಲ್ಲಾ ಮಾಧ‍್ಯಮಗಳಿಗೆ ಮನವಿ ಮಾಡುತ್ತೇನೆ. ನಾಚಿಕೆಯಾಗಬೇಕು ನಿಮಗೆ. ಎಲ್ಲಿ ಹೋಯಿತು ನಿಮ್ಮ ಜವಾಬ್ಧಾರಿ’ ಎಂದು ಕಿಡಿ ಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ