ಇಂದು ಸರ್ಕಾರ ತಡೆ ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ ಸಂಜಯ್ ಗಾಂಧಿ ಪುತ್ರಿ

ಶನಿವಾರ, 22 ಜುಲೈ 2017 (17:42 IST)
ಮುಂಬೈ: ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಅವರ ಪುತ್ರ ದಿವಂಗತ ಸಂಜಯ್‌ ಗಾಂಧಿ ಅವರಪುತ್ರಿ ತಾನು ಎಂದು ಹೇಳಿಕೊಂಡಿರುವ ಪ್ರಿಯಾ ಪೌಲ್‌ ಎಂಬ ಮಹಿಳೆ ಬಾಲಿವುಡ್‌ ಚಿತ್ರ ನಿರ್ದೇಶಕ ಮಧುರ್‌ ಭಂಡಾರ್‌ಕರ್‌ ಅವರ "ಇಂದು ಸರ್ಕಾರ್‌' ಚಿತ್ರಕ್ಕೆ ತಡೆ ನೀಡಬೇಕೆಂದು ಕೋರಿ ಬಾಂಬೆ ಹೈಕೋರ್ಟ್‌ ಮೆಟ್ಟಲೇರಿದ್ದಾರೆ. 
 
ತುರ್ತು ಪರಿಸ್ಥಿತಿಯ ಹಿನ್ನೆಲೆಯನ್ನು ಹೊಂದಿರುವ ತನ್ನ "ಇಂದು ಸರ್ಕಾರ್‌' ಸಿನೇಮಾದ ಶೇ.30 ಭಾಗ ಸತ್ಯಾಂಶ ಹೊಂದಿದ್ದು ಉಳಿದ ಭಾಗ ಕಾಲ್ಪನಿಕವಾಗಿದೆ ಎಂದು ಇತ್ತೀಚೆಗೆ ಮಧುರ್‌ ಭಂಡಾರ್‌ಕರ್‌ ಹೇಳಿಕೊಂಡಿದ್ದರು.  ಈ ಹಿನ್ನಲೆಯಲ್ಲಿ ಭಂಡಾರ್‌ಕರ್‌ ಅವರು ತಮ್ಮ ಇಂದು ಸರ್ಕಾರ್‌ ಚಿತ್ರದಲ್ಲಿ 'ಸತ್ಯ ಯಾವುದು ಕಟ್ಟು ಕಥೆ ಯಾವುದು' ಎಂಬುದನ್ನು ವಿವರಿಸಿ ಸ್ಪಷ್ಟೀಕರಣ ನೀಡುವಂತೆ ಅವರಿಗೆ ನಿರ್ದೇಶ ನೀಡಬೇಕೆಂದು ಕೋರಿ ಪ್ರಿಯಾ ಪೌಲ್‌ ಬಾಂಬೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. 
 
ಸಂಜಯ್‌ ಗಾಂಧಿಯವರನ್ನು ಚಿತ್ರದಲ್ಲಿ ಕೆಟ್ಟದಾಗಿ ತೋರಿಸಿರುವ ಸಾಧ್ಯತೆಯನ್ನು ಪ್ರಿಯಾ ಪೌಲ್‌ ಶಂಕಿಸಿ ಚಿತ್ರದ ತಡೆಗೆ ಹೈಕೋರ್ಟಿಗೆ ಮನವಿ ಸಲ್ಲಿಸಿರುವುದಾಗಿ ತಿಳಿದುಬಂದಿದೆ.ಪ್ರಿಯಾ ಪೌಲ್‌ ಅವರ ಅರ್ಜಿಯ ವಿಚಾರಣೆಯನ್ನು ಬಾಂಬೆ ಹೈಕೋರ್ಟ್‌ ಜುಲೈ 24ರಂದು ನಡೆಸಲಿದೆ. ಇನ್ನು ಜು.28ರಂದು ಚಿತ್ರ ತೆರೆ ಕಾಣಲಿದೆ. 
 

ವೆಬ್ದುನಿಯಾವನ್ನು ಓದಿ