ಕಾಂತಾರ ಲೀಲಾಳ ಬಾಲಿವುಡ್ ಪಯಣ ಆರಂಭಕ್ಕೆ ಕ್ಷಣಗಣನೆ

ಗುರುವಾರ, 17 ಆಗಸ್ಟ್ 2023 (09:32 IST)
ಬೆಂಗಳೂರು: ಕಾಂತಾರ ಸಿನಿಮಾದಲ್ಲಿ ಲೀಲಾ ಪಾತ್ರದ ಮೂಲಕ ಜನ ಮನ ಗೆದ್ದ ನಟಿ ಸಪ್ತಮಿ ಗೌಡ ಈಗ ಬಾಲಿವುಡ್ ಸಿನಿಮಾಗೂ ಎಂಟ್ರಿ ಕೊಟ್ಟಿದ್ದಾರೆ.

ದಿ ಕಾಶ್ಮೀರ್ ಫೈಲ್ಸ್ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಹೊಸ ಸಿನಿಮಾ ವ್ಯಾಕ್ಸಿನ್  ವಾರ್ ನಲ್ಲಿ ಲೀಲಾ ಅಭಿನಯಿಸಿದ್ದಾರೆ. ಇದು ಸಪ್ತಮಿಯ ಮೊದಲ ಬಾಲಿವುಡ್ ಸಿನಿಮಾ.

ಈ ಸಿನಿಮಾ ಸೆಪ್ಟೆಂಬರ್ 28 ರಂದು ತೆರೆಗೆ ಬರಲಿದೆ. ಒಂದು ವೇಳೆ ಈ ಸಿನಿಮಾದಲ್ಲಿ ಲೀಲಾ ಪಾತ್ರ ಕ್ಲಿಕ್ ಆದರೆ ಮತ್ತಷ್ಟು ಪರಭಾಷೆ ಸಿನಿಮಾಗಳು ಲೀಲಾ ಮುಡಿಗೇರುವ ಸಾಧ‍್ಯತೆ ಇಲ್ಲದಿಲ್ಲ. ಕಾಂತಾರ ಬಳಿಕ ಮತ್ತೊಂದು ದೊಡ್ಡ ಸಕ್ಸಸ್ ನಿರೀಕ್ಷೆಯಲ್ಲಿದ್ದಾರೆ ಸಪ್ತಮಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ