ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ನಟ ದರ್ಶನ್ ಮತ್ತೆ ಜೈಲು ಪಾಲಾಗಿದ್ದಾರೆ. ಆದರೆ ಈ ಬಾರಿ ಅವರ ಅಭಿಮಾನಿಗಳು ಫುಲ್ ಸೈಲೆಂಟ್ ಮೋಡ್ ಗೆ ತೆರಳಿದ್ದಾರೆ.
ನಟ ದರ್ಶನ್ ಸೇರಿದಂತೆ 7 ಪ್ರಮುಖ ಆರೋಪಿಗಳಿಗೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ರದ್ದುಪಡಿಸಿತ್ತು. ತಕ್ಷಣವೇ ದರ್ಶನ್ ಸೇರಿದಂತೆ 7 ಆರೋಪಿಗಳನ್ನು ಬಂಧಿಸಲು ಕೋರ್ಟ್ ಆದೇಶ ನೀಡಿತ್ತು. ಅದರಂತೆ ನಿನ್ನೆ ಅಪರಾಹ್ನ ದರ್ಶನ್ ರನ್ನು ಪೊಲೀಸರು ಬಂಧಿಸಿದ್ದಾರೆ.
ಮೊದಲ ಬಾರಿಗೆ ರೇಣುಕಾಸ್ವಾಮಿ ಕೇಸ್ ನಲ್ಲಿ ದರ್ಶನ್ ಬಂಧಿತರಾದಾಗ ಅಭಿಮಾನಿಗಳು ಅತಿರೇಕದ ವರ್ತನೆ ತೋರಿದ್ದರು. ಠಾಣೆ ಮುಂದೆ ಬಂದು ಡಿಬಾಸ್ ಗೆ ಜೈಕಾರ ಹಾಕಿದ್ದರು. ಇತ್ತೀಚೆಗೆ ಹಲವು ಬಾರಿ ದರ್ಶನ್ ಬಗ್ಗೆ ಯಾರು ಏನೇ ಹೇಳಿದರೂ ಸೋಷಿಯಲ್ ಮೀಡಿಯಾದಲ್ಲೂ ಅವರ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದರು.
ಆದರೆ ಅಭಿಮಾನಿಗಳ ಇಂತಹ ಅತಿರೇಕದ ವರ್ತನೆಯೂ ದರ್ಶನ್ ಗೆ ಮುಳುವಾಗುತ್ತಿದೆ. ಇದೇ ಕಾರಣಕ್ಕೆ ಈ ಬಾರಿ ದರ್ಶನ್ ಅರೆಸ್ಟ್ ಆದಾಗ ಅಭಿಮಾನಿಗಳು ಸೈಲೆಂಟ್ ಆಗಲು ತೀರ್ಮಾನಿಸಿದ್ದಾರೆ. ಬಾಸ್ ಹೊರ ಬರುವವರೆಗೂ ತಾಳ್ಮೆಯಿಂದಿರೋಣ. ಸೋಷಿಯಲ್ ಮೀಡಿಯಾದಲ್ಲಿ, ಸಾರ್ವಜನಿಕವಾಗಿ ಕಾಮೆಂಟ್ ಮಾಡದೇ ಇರಲು ತೀರ್ಮಾನಿಸಿದ್ದಾರೆ.