ಮಗಳು ಸಾರಾಗಾಗಿ ಲಂಡನ್‌ನಲ್ಲಿ ಪಾರ್ಟಿ ಆಯೋಜಿಸಿದ ಸೈಫ್ ಅಲಿ ಖಾನ್
ಶುಕ್ರವಾರ, 20 ಮೇ 2016 (16:48 IST)
ಸೈಫ್ ಅಲಿ ಖಾನ್ ಮಗಳು ಸಾರಾ ಕೋಲಂಬಿಯಾ ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ಪದವಿ ಪಡೆದಿದ್ದಾರೆ. ಇದಕ್ಕಾಗಿ ಸೈಫ್ ಅಲಿ ಖಾನ್ ಮಗಳು ಸಾರಾಗಾಗಿ ಡಿನ್ನರ್ ಪಾರ್ಟಿ ಆಯೋಜನೆ ಮಾಡಿದ್ದರು. ವಿಶ್ವವಿದ್ಯಾಲಯಲ್ಲಿ ಪದವಿ ಸಮಾರಂಭದ ಬಳಿಕ ಸೈಫ್ ಮಗಳಿಗಾಗಿ ಡಿನ್ನರ್ ಆಯೋಜಿಸಿದ್ರು..
ಈ ಬಗ್ಗೆ ಫ್ಯಾನ್ಸ್ ಕ್ಲಬ್ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ. ಇನ್ನೂ ಸಾರಾ ಬಾಲಿವುಡ್‌ನಲ್ಲಿ ನಟಿಸಲಿದ್ದಾರೆ ಎಂದು ಈ ಹಿಂದೆ ಹೇಳಲಾಗ್ತಿತ್ತು.. ಇದಕ್ಕಾಗಿ ಅವರು ಕಾತುರದಲ್ಲಿದ್ದಾರಂತೆ. ಕರಣ್ ಜೋಹರ ನಿರ್ಮಾಣದ ಚಿತ್ರದಲ್ಲಿ ಸಾರಾ ನಟಿಸಲಿದ್ದಾರೆ ಎಂದು ಹೇಳಲಾಗ್ತಿದೆ. ಅಂದಹಾಗೆ ಕರಣ್ ಸ್ಟೂಡೆಂಟ್ ಆಫ್ ದಿ ಇಯರ್ ಎಂಬ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಇತ್ತೀಚೆಗೆ ನೀಡಿದ್ದ ಸಂದರ್ಶನದಲ್ಲಿ ಸೈಫ್ ಈ ಈ ರೀತಿ ಹೇಳಿಕೆ ನೀಡಿದ್ದರು. ಸಾರಾ ಏನು ಮಾಡ್ತಾಳೋ ಎಲ್ಲದಕ್ಕೂ ಪ್ರೋತ್ಸಾಹ ನೀಡ್ತೀನಿ, ಮೊದಲು ಅವಳು ಡಿಗ್ರಿ ಕಂಪ್ಲೀಟ್ ಮಾಡಲಿ, ಬಳಿಕ ಅವಳು ಏನು ಮಾಡ್ತಾಳೋ ಅದೆಲ್ಲದಕ್ಕು ಪ್ರೋತ್ಸಾಹ ನೀಡ್ತೀನಿ ಎಂದು ಸೈಫ್ ಅಲಿ ಖಾನ್ ಹೇಳಿದ್ದರು.
ಸಾರಾ ಮೊದಲ ಪತ್ನಿ ಅಬೃತಾ ಹಾಗೂ ಸೈಫ್ ಅಲಿ ಮಗಳು... ಅಲ್ಲದೇ ಮಗಳು ವಿದ್ಯಾಭ್ಯಾಸ ಮುಗಿಸಿದ ಹಿನ್ನೆಲೆ ಇನ್‌ಸ್ಟಾಗ್ರಾಮ್ ನಲ್ಲಿ ಅಬೃತಾ ಸಿಂಗ್ ಶುಭಾಷಯ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ