ಮೃತರು ಸಹೋದರ ರೇಣುಕಾ ವಿಜಯ್ ಸೇರಿದಂತೆ ಹಲವು ಬಂಧು ಬಳಗ, ಚಿತ್ರರಂಗದ ಹಲವು ಗೆಳೆಯರು, ರಂಗಭೂಮಿಯ ಒಡನಾಡಿಗಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇವತ್ತು ಬನಶಂಕರಿಯಲ್ಲಿ ನೆರವೇರಲಿದೆ.
1989 ಮೂಡಿ ಬಂದ 'ಮಧುಮಾಸ್' ಚಿತ್ರದಲ್ಲಿ ಕಾಶಿಯ ಸಿನಿಮಾ ಪಯಣ ಶುರುವಾಗಿತ್ತು. ಅಲ್ಲಿಂದ ಮುಂದುವರೆದ ಅವರ ಸಿನಿಮಾ ಯಾತ್ರೆ, ಇನ್ನೂ ಬಿಡುಗಡೆಯಾಗದ ರಾಜಕುಮಾರ್, ಜಾನ್ ಜಾನಿ ಜನಾರ್ದನ್ ಚಿತ್ರದಲ್ಲಿ ನಟಿಸಿದ್ದರು. ನಟ ರಮೇಶ್ ಅವರವಿಂದ್ ಜತೆಗೆ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದರು.
ಇವರ ಯಶಸ್ವಿ ಚಿತ್ರಗಳಾದ 'ಉಲ್ಟಾ ಪಲ್ಟಾ', 'ನಮ್ಮೂರ ಮಂದಾರ ಹೂವೇ', 'ಮಾಂಗಲ್ಯಂ ತಂತುನಾನೇನಾ', 'ಸಿಪಾಯಿ', 'ನಾನು ನನ್ನ ಹೆಂಡ್ತೀರು',' ಪಂಚಮ ವೇದ' ಸೇರಿದಂತೆ 115ಕ್ಕೂ ಅಧಿಕ ಚಿತ್ರಗಳಲ್ಲಿ ಸಂಕೇತ್ ಕಾಶಿ ಕಾಣಿಸಿಕೊಂಡಿದ್ದರು. 'ನನ್ ಹೆಂಡ್ತಿ ಚೆನ್ನಾಗಿದ್ದಾಳೆ' ಚಿತ್ರದಲ್ಲಿ ಕಾಶಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದರು.