ಶಾರೂಖ್ ಖಾನ್‌ಗೆ ನೊಟೀಸ್ ನೀಡಿದ ಮಿಠಾಯಿ ವ್ಯಾಪಾರಿ

ಶನಿವಾರ, 7 ಮೇ 2016 (16:54 IST)
ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್‌ ಹಾಗೂ ನಿರ್ದೇಶಕರಿಗೆ ಮಿಠಾಯಿ  ವ್ಯಾಪಾರಿಯೊಬ್ಬ ಲೀಗಲ್ ನೊಟೀಸ್ ಕಳುಹಿಸಿರುವುದು ತಿಳಿದು ಬಂದಿದೆ.. ಶಾರೂಖ್ ತಮ್ಮ ಫ್ಯಾನ್ ಚಿತ್ರದಲ್ಲಿ ಮಿಠಾಯಿ ಬ್ಯ್ರಾಂಡ್ ಬಳಕೆ ಮಾಡಿದ್ದಾರೆ. ಆದರೆ ಈ ಕುರಿತು ನನ್ನ ಅನುಮತಿ ಪಡೆಯಲಾಗಿಲ್ಲ ಎಂದು ಮಿಠಾಯಿ ವ್ಯಾಪಾರಿ ಆರೋಪಿಸಿದ್ದಾರೆ.. 
ವರದಿಯಂತೆ ಮಿಠಾಯಿ ಶಾಪ್ ಮಾಲೀಕ ಸುಶಾಂತ ಜೈನ್ ಫ್ಯಾನ್ ಚಿತ್ರ ನಟ, ನಿರ್ಮಾಪಕ ಹಾಗೂ ನಿರ್ದೇಶರಿಗೆ ನೊಟೀಸ್ ಕಳುಹಿಸಿದ್ದಾರಂತೆ. 
 
ನನ್ನ ಅನುಮತಿ ಇಲ್ಲದೆ ಬ್ರ್ಯಾಂಡ್ ಬಳಕೆ ಮಾಡಲಾಗಿದೆ. ಇದು ಸರಿಯಲ್ಲ. ಅದಕ್ಕಾಗಿ ಚಿತ್ರದ ನಿರ್ಮಾಪಕರು ಅನುಮತಿ ಪಡೆಯಬೇಕಿತ್ತು ಎಂದು ಸುಶಾಂತ್ ಜೈನ್ ತಿಳಿಸಿದ್ದಾರೆ.ಇನ್ನೂ ಈ ಚಿತ್ರದಲ್ಲಿ ಶಾರೂಖ್ ಡಬಲ್ ರೋಲ್ ಗೌರವ್ ಈ ಶಾಪ್‌ನಿಂದ ಮಿಠಾಯಿ ತೆಗೆದುಕೊಂಡು ಹೋಗುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಾರೆ. 

ಭಾರತ ಹಾಗೂ ಇತರೆ ದೇಶಗಳು ಸೇರಿದಂತೆ ಫ್ಯಾನ್ ಚಿತ್ರ  4600  ಚಿತ್ರಮಂದಿರಗಳಲ್ಲಿ ಫ್ಯಾನ್ ಚಿತ್ರ ರಿಲೀಸ್ ಆಗಿತ್ತು.. ಖ್ಯಾತ ನಿರ್ಮಾಪಕ ಯಶ್ ರಾಜ್ ಫಿಲ್ಮ್ಂ ಬ್ಯಾನರ್ ನಲ್ಲಿ ಮೂಡಿ ಬಂದಿರುವ ಫ್ಯಾನ್ ಚಿತ್ರ ಅಧಿಕ ಕಲೆಕ್ಷನ್ ಮಾಡಿತ್ತು, 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ