ತನಗೆ ಜೀವನ ಕೊಟ್ಟ ಮೂರೂ ರಾಜ್ಯಗಳಿಗೆ ಭರಪೂರ ಕೊಡುಗೆ ಕೊಟ್ಟ ಶಾರುಖ್ ಖಾನ್

ಸೋಮವಾರ, 6 ಏಪ್ರಿಲ್ 2020 (09:42 IST)
ಮುಂಬೈ: ತಡವಾಗಿಯಾದರೂ ಕೊರೋನಾ ಪರಿಹಾರ ಕಾರ್ಯಕ್ಕೆ ಬಾಲಿವುಡ್ ನಟ ಶಾರುಖ್ ಖಾನ್ ಭಾರೀ ಕೊಡುಗೆ ನೀಡಿದ್ದಾರೆ. ಪ್ರಧಾನಿ ಪರಿಹಾರ ನಿಧಿಗೆ ಕೊಡುಗೆ ನೀಡಿದ್ದಲ್ಲದೆ ಶಾರುಖ್ ತನಗೆ ಜೀವನ ಕೊಟ್ಟ ಮೂರೂ ರಾಜ್ಯಗಳನ್ನೂ ಮರೆತಿಲ್ಲ.


ಶಾರುಖ್ ಹುಟ್ಟಿದ್ದು ದೆಹಲಿಯಲ್ಲಿ. ಹೆಸರು ಮಾಡಿದ್ದು ಮುಂಬೈ, ಮಹಾರಾಷ್ಟ್ರದಲ್ಲಿ. ಆ ಬಳಿಕ ಕೋಲ್ಕೊತ್ತಾ ನೈಟ್ ರೈಡರ್ಸ್ ಐಪಿಎಲ್ ತಂಡವನ್ನು ಖರೀದಿಸಿ ಪಶ್ಚಿಮ ಬಂಗಾಲಕ್ಕೂ ಹತ್ತಿರವಾದರು.

ಈ ಮೂರೂ ರಾಜ್ಯಗಳಿಗೂ ಶಾರುಖ್ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದಾರೆ. ಅದಲ್ಲದೆ, ತಮ್ಮ ಮಾಲಿಕತ್ವದ ಕಟ್ಟಡವೊಂದನ್ನು ಕ್ವಾರಂಟೈನ್ ರೋಗಿಗಳನ್ನು ಇರಿಸಲು ನೀಡಿದ್ದಾರೆ. ಇದಲ್ಲದೆ ಕಾರ್ಮಿಕರು, ಬಡವರಿಗೆ ಊಟದ ವ್ಯವಸ್ಥೆಯನ್ನೂ ಮಾಡಿಸಿದ್ದಾರೆ. ಈ ಮೂಲಕ ಅಭಿಮಾನಿಗಳ ಕೈಯಲ್ಲಿ ಹೀರೋ ಎನಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ