ಮೈಸೂರಿನಲ್ಲಿ ಜನ್ ಧನ್ ಖಾತೆದಾರರ ಮನೆಗೆ ತಲುಪಲಿದೆ ಹಣ

ಭಾನುವಾರ, 5 ಏಪ್ರಿಲ್ 2020 (10:49 IST)
ಬೆಂಗಳೂರು : ದೇಶ ಲಾಕ್ ಡೌನ್ ಮಾಡಿದ ಹಿನ್ನಲೆಯಲ್ಲಿ ಜನ್ ಧನ್ ಖಾತೆದಾರರ ಮನೆಗೆ ಹಣ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

ಕೊರೊನಾ ವೈರಸ್ ನಿಯಂತ್ರಿಸಲು ದೇಶ ಲಾಕ್ ಡೌನ್ ಮಾಡಲಾಗಿದೆ. ಆದಕಾರಣ ಜನರ ಜನ್ ಧನ್ ಖಾತೆಗೆ ತಿಂಗಳಿಗೆ 500 ರೂ ಹಾಕಲು ಸರ್ಕಾರ ಮುಂದಾಗಿದೆ. ಮೈಸೂರಿನಲ್ಲಿ ಜನ್ ಧನ್ ಖಾತೆದಾರರ ಮನೆಗೆ ಹಣ ತಲುಪುವ ವ್ಯವಸ್ಥೆ ಮಾಡಲಾಗುತ್ತಿದೆ .

 

ಲಾಕ್ ಡೌನ್ ಹಿನ್ನಲೆ ಜನ ಹೊರಗೆ ಬಾರದಂತೆ ಕ್ರಮ ಕೈಗೊಳ್ಳಲು ಜನರಿಗೆ ಮೊಬೈಲ್ ಎಟಿಎಂನಿಂದ ಹಣ ಪಡೆಯುವುದಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಇನ್ನು ಕೆಲವರಿಗೆ  ನೇರವಾಗಿ ಮನೆಗೆ ಬಂದು 500 ರೂ. ವಿತರಣೆ ಮಾಡಲು ಮುಂದಾಗಿದೆ ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ