ವೈರುಧ್ಯಗಳ ಮರೆಯೋಣ, ಜೊತೆಯಾಗಿ ಸಹಾಯ ಮಾಡೋಣ: ಕಿಚ್ಚ ಸುದೀಪ್ ಕರೆ

ಸೋಮವಾರ, 6 ಏಪ್ರಿಲ್ 2020 (09:37 IST)
ಬೆಂಗಳೂರು: ಕೊರೋನಾವೈರಸ್ ನಿಂದಾಗಿ ದೇಶವೇ ಲಾಕ್ ಡೌನ್ ಸ್ಥಿತಿಯಲ್ಲಿದ್ದು, ಜನರು ದಿನನಿತ್ಯದ ಊಟಕ್ಕಾಗಿ ಪರದಾಡುವ ಸ್ಥಿತಿಯಿದೆ. ಇಂತಹ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ಕಲಾವಿದರೂ ಬಡವರ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ.


ಅಗತ್ಯ ದಿನಸಿ, ಹಾಲು, ತರಕಾರಿ ಒದಗಿಸುವುದು ಇನ್ನು ಕೆಲವೆಡೆ ಬಡವರಿಗೆ ನಿತ್ಯ ಊಟದ ವ್ಯವಸ್ಥೆ ಮಾಡುವುದು ಇತ್ಯಾದಿಗಳು ನಡೆಯುತ್ತಿವೆ. ಸ್ಯಾಂಡಲ್ ವುಡ್ ನ ಬಹುತೇಕ ಸ್ಟಾರ್ ನಟರು ತಮ್ಮ ಅಭಿಮಾನಿ ಸಂಘಗಳ ಮೂಲಕ ಈ ಕೆಲಸ ಮಾಡುತ್ತಿದ್ದಾರೆ.

ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪರವಾಗಿ ಕೆಲಸ ಮಾಡುತ್ತಿರುವ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿರುವ ಕಿಚ್ಚ ಸುದೀಪ್ ‘ಎಲ್ಲರೂ ನಮ್ಮ ನಡುವೆ ಏನೇ ವೈಮನಸ್ಯಗಳು, ವೈರುಧ್ಯಗಳಿದ್ದರೂ ಮರೆತು ಜೊತೆಯಾಗಿ ಕೆಲಸ ಮಾಡೋಣ. ಯಾರಿಗೆ ಅಗತ್ಯ ವಸ್ತುಗಳ ಅಗತ್ಯವಿದೆಯೋ ಅವರಿಗೆ ಒದಗಿಸೋಣ. ಎಲ್ಲಕ್ಕಿಂತ ಜೀವ ದೊಡ್ಡದು’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ