ವಿರಾಟ್ ಕೊಹ್ಲಿಗೆ ಪಠಾಣ್ ನೃತ್ಯ ಹೇಳಿಕೊಟ್ಟ ಶಾರುಖ್ ಖಾನ್

ಶುಕ್ರವಾರ, 7 ಏಪ್ರಿಲ್ 2023 (09:30 IST)
Photo Courtesy: Twitter
ಕೋಲ್ಕೊತ್ತಾ: ಐಪಿಎಲ್ 2023 ರಲ್ಲಿ ಕೋಲ್ಕೊತ್ತಾ ನೈಟ್ ರೈಡರ್ಸ್ ಮತ್ತು ಆರ್ ಸಿಬಿ ನಡುವಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಶಾರುಖ್ ಖಾನ್ ಭೇಟಿಯ ಕ್ಷಣದ ವಿಡಿಯೋ ವೈರಲ್ ಆಗಿದೆ.

ಕೆಕೆಆರ್ ಮಾಲಿಕರಾಗಿರುವ ಶಾರುಖ್ ಖಾನ್ ಮೈದಾನದಲ್ಲಿದ್ದ ಕೊಹ್ಲಿಯನ್ನು ಭೇಟಿಯಾಗಿದ್ದಾರೆ. ಈ ವೇಳೆ ಕೊಹ್ಲಿಯನ್ನು ಅಪ್ಪಿಕೊಂಡ ಶಾರುಖ್ ಬಳಿಕ ಪಠಾಣ್ ಸಿನಿಮಾದ ಹಾಡಿಗೆ ನೃತ್ಯ ಹೇಳಿಕೊಟ್ಟರು.

ಮೊದಲು ಕೊಹ್ಲಿ ನಗುತ್ತಲೇ ನಿರಾಕರಿಸಿದರೂ ಬಳಿಕ ಶಾರುಖ್ ಒತ್ತಾಯಕ್ಕೆ ಮಣಿದು ಹೆಜ್ಜೆ ಹಾಕಿದರು. ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ