ಐಪಿಎಲ್ 2023: ಪಂಜಾಬ್ ಗೆ ರೋಚಕ ಗೆಲುವು

ಗುರುವಾರ, 6 ಏಪ್ರಿಲ್ 2023 (08:30 IST)
ಗುವಾಹಟಿ: ಐಪಿಎಲ್ 2023 ರಲ್ಲಿ ರಾಜಸ್ಥಾನ್ ‍ರಾಯಲ್ಸ್ ವಿರುದ್ಧ ಕಿಂಗ್ಸ್ ಪಂಜಾಬ್ ರೋಚಕ 5 ರನ್ ಗಳ ಗೆಲುವು ಸಾಧಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿತು. ಪಂಜಾಬ್ ಪರ ಶಿಖರ್ ಧವನ್ ನಾಯಕನ ಆಟವಾಡಿದರು. 56 ಎಸೆತಗಳಿಂದ 86 ರನ್ ಸಿಡಿಸಿದ ಧವನ್ ಗೆ ಪ್ರಭಿಸ್ಮರನ್ 34 ಎಸೆತಗಳಿಂದ 60 ರನ್ ಗಳಿಸಿ ಮಿಂಚಿದರು.

ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ತಕ್ಕ ಪೈಪೋಟಿ ನೀಡಿತು. ನಾಯಕ ಸಂಜು ಸ್ಯಾಮ್ಸನ್ 42, ಶಿಮ್ರಾನ್ ಹೆಟ್ಮೈರ್ 36 ರನ್ ಗಳಿಸಿದರು. ಅಂತಿಮ ಓವರ್ ನಲ್ಲಿ 6 ಎಸೆತಗಳಿಂದ 16 ರನ್ ಗಳಿಸಬೇಕಿತ್ತು. ಯುವ ಆಟಗಾರ ಧ್ರುವ್ ಜ್ಯುರೆಲ್ ಹೋರಾಟ ನಡೆಸಿ 15 ಎಸೆತಗಳಿಂದ 32 ರನ್ ಗಳಿಸಿದರು. ಅಂತಿಮ ಓವರ್ ನಲ್ಲಿ ಹೆಟ್ಮೈರ್ ರನೌಟ್ ಆಗದೇ ಇದ್ದರೆ ರಾಜಸ್ಥಾನ್ ಗೆಲ್ಲುತ್ತಿತ್ತೇನೋ. ಆದರೆ ಅಂತಿಮವಾಗಿ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಲಷ್ಟೇ ಶಕ್ತವಾಯಿತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ