ಕುಟುಂಬ ಸಮೇತ ಕಟೀಲಿಗೆ ಭೇಟಿ ಕೊಟ್ಟ ನಟಿ ಶಿಲ್ಪಾ ಶೆಟ್ಟಿ
ಶಿಲ್ಪಾ ಮೂಲತಃ ಮಂಗಳೂರಿನವರು ಎಂದು ಎಲ್ಲರಿಗೂ ಗೊತ್ತೇ ಇದೆ. ತುಳುವರ ಬೆಡಗಿ ಶಿಲ್ಪಾ ಆಗಾಗ ತಮ್ಮ ಊರಿನ ದೇವಾಲಯಕ್ಕೆ ಭೇಟಿ ಕೊಡುತ್ತಿರುತ್ತಾರೆ.
ಈ ಬಾರಿ ತಮ್ಮ ಪತಿ ರಾಜ್ ಕುಂದ್ರಾ, ಮಕ್ಕಳು, ತಾಯಿಯ ಜೊತೆಗೆ ಬಂದು ದೇವಿಯ ದರ್ಶನ ಪಡೆದಿದ್ದಾರೆ. ತಮ್ಮ ಮಕ್ಕಳಿಗೂ ಕುಲದೇವಿಯ ದರ್ಶನ ಮಾಡಿಸಲು ಕುಟುಂಬ ಸಮೇತರಾಗಿ ಸಾಂಪ್ರದಾಯಿಕ ಉಡುಗೆಯಲ್ಲಿ ದೇವಾಲಯಕ್ಕೆ ಆಗಮಿಸಿದ್ದರು.