ಜನರಿಗೆ ನನ್ನ ತಪ್ಪು ಹುಡುಕೋದೇ ಕೆಲಸವಾಗಿಬಿಟ್ಟಿದೆ:ಪ್ರಿಯಾಂಕ ಚೋಪ್ರಾ
ಆಸ್ಕರ್ ಪ್ರಶಸ್ತಿ ಸಮಾರಂಭ ವೇಳೆ ಪ್ರಿಯಾಂಕ ಆರ್ ಆರ್ ಆರ್ ತಮಿಳು ಸಿನಿಮಾ ಎಂದು ಎಡವಟ್ಟು ಮಾಡಿದ್ದರು. ಇದಕ್ಕೆ ಅವರು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗಿದ್ದರು.
ಇದೀಗ ಪ್ರಿಯಾಂಕ ಆ ಬಗ್ಗೆ ಪ್ರತಿಕ್ರಿಯಿಸಿದ್ದು, ಜನರಿಗೆ ಇತ್ತೀಚೆಗೆ ನಾನು ಏನೇ ಮಾಡಿದರೂ ತಪ್ಪು ಹುಡುಕೋದೇ ಕೆಲಸವಾಗಿದೆ. ನಾವು ಎತ್ತರಕ್ಕೆ ಏರಿದಷ್ಟು ನಮ್ಮ ಬಗ್ಗೆ ಮಾತನಾಡುವುದು, ಟೀಕೆ ಮಾಡುವುದು ಹೆಚ್ಚು. ಆದರೆ ನಾನು ನನ್ನ ಜೀವನದ ಸಕಾರಾತ್ಮಕ ವಿಚಾರಗಳ ಬಗ್ಗೆ ಗಮನ ಹರಿಸುತ್ತೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.