ಹೈಪ್ ಕ್ರಿಯೇಟ್ ಆಗಿದ್ದರೂ ಗೆಲ್ಲದ ಸಲ್ಮಾನ್ ಖಾನ್ ಸಿನಿಮಾ

ಶನಿವಾರ, 22 ಏಪ್ರಿಲ್ 2023 (17:34 IST)
Photo Courtesy: Twitter
ಮುಂಬೈ: ಬಾಲಿವುಡ್ ಸ್ಟಾರ್ ನಟರು ಇತ್ತೀಚೆಗೆ ಸಾಲು ಸಾಲು ಸೋಲು ಕಾಣುತ್ತಿದ್ದಾರೆ. ಆ ಸಾಲಿಗೆ ನಟ ಸಲ್ಮಾನ್ ಖಾನ್ ಸೇರಿಕೊಂಡಿದ್ದಾರೆ.

ಸಲ್ಮಾನ್ ಖಾನ್-ಪೂಜಾ ಹೆಗ್ಡೆ ನಟನೆಯ ಕಿಸಿ ಕ ಭಾಯ್ ಕಿಸೀ ಕಿ ಜಾನ್ ಸಿನಿಮಾ ಬಗ್ಗೆ ಭಾರೀ ನಿರೀಕ್ಷೆಯಿತ್ತು. ಸಿನಿಮಾದಲ್ಲಿ ಸೌತ್ ಸ್ಟಾರ್ ಗಳನ್ನೂ ಕರೆತಂದು ಸಿನಿಮಾ ತಂಡ ಹೊಸ ಪ್ರಯೋಗ ಮಾಡಿತ್ತು.

ಆದರೆ ಇದ್ಯಾವುದೂ ವರ್ಕೌಟ್ ಆಗಲೇ ಇಲ್ಲ. ಈ ಸಿನಿಮಾ ಮೊದಲ ದಿನದ ಕಲೆಕ್ಷನ್ ನೀರಸವಾಗಿದ್ದು, ಐಎಂಡಿಬಿ ಶ್ರೇಯಾಂಕದಲ್ಲಿ 10 ಕ್ಕೆ 6.5 ಅಂಕ ಮಾತ್ರ ಸಿಕ್ಕಿದೆ. ಇಷ್ಟು ದಿನ ಮೊದಲ ದಿನವೇ 50 ಕೋಟಿವರೆಗೆ ಕಲೆಕ್ಷನ್ ಮಾಡುತ್ತಿದ್ದ ಸಲ್ಮಾನ್ ಸಿನಿಮಾ ಈ ಬಾರಿ ಕೇವಲ 15 ಕೋಟಿ ಗಳಿಕೆ ಮಾಡಿದೆಯಷ್ಟೇ. ಯಾವುದೇ ಗಿಮಿಕ್ ಗಳು ಪ್ರೇಕ್ಷಕರನ್ನು ಥಿಯೇಟರ್ ಗೆ ಕರೆತರಲು ಯಶಸ್ವಿಯಾಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ