ಶಿವಣ್ಣನ ಮತ್ತೊಂದು ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಪಡೆದ ವಸಿಷ್ಟ

ಸೋಮವಾರ, 8 ಆಗಸ್ಟ್ 2016 (09:05 IST)
ಸಾಮಾನ್ಯವಾಗಿ ಯಾವುದೇ ಸಿನಿಮಾ ನೋಡಿದ್ರು ನಮಗೆ ಜಾಸ್ತಿ ನೆನಪಿರೋದು ಆ ಸಿನಿಮಾದ ನಾಯಕ ಹಾಗೂ ನಾಯಕಿ ಇಲ್ಲೋ ಸಿನಿಮಾ ಯಾವುದಾರೊಂದು ಪೋಷಕ ಪಾತ್ರ. ಖಳನಾಯಕ ಪಾತ್ರ ಎಷ್ಟೇ ಚೆನ್ನಾಗಿದ್ದರೂ ನಾವು ಅಷ್ಟೊಂದು ಹೊಗಳೋದಕ್ಕೆ ಹೋಗೋದೇ ಇಲ್ಲ. ಶಿವರಾಜ್ ಕುಮಾರ್ ಅವರು ಅಭಿನಯಿಸುತ್ತಿರುವ ಮತ್ತೊಂದು ಸಿನಿಮಾದಲ್ಲಿ ಅಭಿನಯಿಸುವಂತಹ ಅವಕಾಶ ಪಡೆದಿದ್ದಾರೆ ವಸಿಷ್ಟ.


ಆದ್ರೆ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ನೋಡಿದ ಮಂದಿಯೆಲ್ಲಾ ಸಿನಿಮಾದ ವಿಲನ್ ಸತ್ತಾಗ ಕಣ್ಣೀರು ಹಾಕಿದ್ರೆ . ಆ ಪಾತ್ರವನ್ನು ಅಷ್ಟು ಚೆನ್ನಾಗಿ ನಿರ್ವಹಿಸಿದ್ದರು ವಸಿಷ್ಟ.

ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾದ ಬಳಿಕ ವಸಿಷ್ಟ ಅವರಿಗೆ ಒಳ್ಳೊಳ್ಳೆ ಅವಕಾಶಗಳು ಅರಸಿಕೊಂಡು ಬರುತ್ತಿವೆ.ಉಪೇಂದ್ರ ಮತ್ತೆ ಹುಟ್ಟಿ ಬಾ ಸಿನಿಮಾದಲ್ಲಿ ವಸಿಷ್ಟ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಲ್ಲದೇ ಶಿವರಾಜ್ ಕುಮಾರ್ ಹಾಗೂ ಶ್ರೀಮುರಳಿ ಕಾಂಬಿನೇಷನ್ ನಲ್ಲಿ ಮೂಡಿ ಬರುತ್ತಿರುವ ಮುಫ್ತಿ ಸಿನಿಮಾದಲ್ಲಿ ವಸಿಷ್ಟ ಅವರಿದ್ದಾರೆ.

ಹೀಗಿರುವಾಗಲೇ ಶಿವರಾಜ್ ಕುಮಾರ್ ಅವರು ಅಭಿನಯಿಸುತ್ತಿರುವ ಮತ್ತೊಂದು ಸಿನಿಮಾದಲ್ಲಿ ಅಭಿನಯಿಸುವಂತಹ ಅವಕಾಶ ಪಡೆದಿದ್ದಾರೆ ವಸಿಷ್ಟ.

ಮಾನ್ವಿತಾ ಹರೀಶ್ ಹಾಗೂ ಶಿವಣ್ಣ ಅವರ ತಾರಾಗಣದಲ್ಲಿ ಮೂಡಿ ಬರುತ್ತಿರುವ ಟಗರು ಸಿನಿಮಾದಲ್ಲೂ ವಸಿಷ್ಟ ಅವರು ಅಬಿನಯಿಸುತ್ತಿದ್ದಾರೆ. ಈಗಗಾಲೇ ವಸಿಷ್ಟ ಅವರ ಅಭಿನಯ ನೋಡಿ ಮೆಚ್ಚಿಕೊಂಡಿರುವ ಟಗರು ಸಿನಿಮಾದ ನಿರ್ದೇಶಕರಾಗಿರುವ ಸೂರಿ ಅವರು ವಸಿಷ್ಟ ಅವರ ಜೊತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರಂತೆ.

ಸದ್ಯ ವಸಿಷ್ಟ ಅವರು ಮೈಸೂರಿನಲ್ಲಿ ಉಪೇಂದ್ರ ಮತ್ತೆ ಹುಟ್ಟಿ ಬಾ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆದ ಬಳಿಕ ಟಗರು ಸಿನಿಮಾಕ್ಕೆ ಸಹಿ ಮಾಡುತ್ತೇನೆ ಅಂತಾ ವಸಿಷ್ಟ ಅವರು ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ