ವೇಶ್ಯಾವಾಟಿಕೆ ಧಂಧೆಯಲ್ಲಿ ಹಲವಾರು ನಟಿಯರಿದ್ದಾರೆ ಎಂದ ನಟಿ

ಶುಕ್ರವಾರ, 8 ಡಿಸೆಂಬರ್ 2023 (11:24 IST)
ಶ್ವೇತಾ ಬಸು ವೇಶ್ಯಾವಾಟಿಕೆ ಧಂಧೆಯಲ್ಲಿ ಸಿಕ್ಕಿಬಿದ್ದ ಬಳಿಕ ಇನ್ನೂ ಅನೇಕ ಟಾಲಿವುಡ್ ಹೀರೋಯಿನ್‌ಗಳು ಈ ದಂಧೆಯಲ್ಲಿ ತೊಡಗಿದ್ದಾರೆಂದು ಹೇಳಿದ್ದು, ಮೊದಲಿಗೆ ಹಂಸಳ ಹೆಸರನ್ನು ಬಿಚ್ಚಿಟ್ಟಿದ್ದಾಳೆ.

ಹಂಸ ಫುಲ್ ಟೈಮ್ ಹೀರೋಯಿನ್ ಆಗದಿದ್ರೂ ಸೆಕೆಂಡ್ ಹೀರೋಯಿನ್ ಆಗಿದ್ದಳು. ತೆಲುಗು ಚಿತ್ರಪ್ರೇಮಿಗಳನ್ನು ತನ್ನ ಐಟಂ ಡ್ಯಾನ್ಸ್ ಮೂಲಕ ಮನಸೂರೆಗೊಂಡಿದ್ದಳು.
 
ಮತ್ತೊಬ್ಬ ತೆಲುಗು ನಟಿ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ಕನ್ನಡದ ನಾಯಕ ನಟ ಕಿಚ್ಚ ಸುದೀಪ್ ಜತೆ ಹಂಸ ನಂದಿನಿ ನಟಿಸಿದ್ದಳು. ತೆಲುಗು ವೆಬ್‌ಸೈಟ್‌ನಲ್ಲಿ ಇದೇ ಹಾಟ್ ಸುದ್ದಿಯಾಗಿದೆ. ಟಾಲಿವುಡ್ ನಟಿ ಶ್ವೇತಾ ಬಸು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬಳಿಕ ಹಂಸ ನಂದಿನಿ ಹೆಸರನ್ನು ಮೈಮಾರಿಕೊಳ್ಳುವ ದಂಧೆಯಲ್ಲಿ ಬಿಚ್ಚಿಟ್ಟಿದ್ದಾಳೆ. ಕೊತ್ತ ಬಂಗಾರು ಲೋಕಂ ಖ್ಯಾತಿಯ ಶ್ವೇತಾ ಬಸು ತೆಲುಗು ಸುದ್ದಿ ಚಾನೆಲ್‌ವೊಂದರ ಕುಟುಕು ಕಾರ್ಯಾಚರಣೆಯಲ್ಲಿ ಸೆಕ್ಸ್ ದಂಧೆಯಲ್ಲಿ ತೊಡಗಿರುವುದು ಪತ್ತೆಯಾಗಿತ್ತು.
 
ಹಂಸ ನಂದಿನಿ ಕನ್ನಡ ಚಿತ್ರವೊಂದರಲ್ಲಿ ಸಾಕಷ್ಟು ಬೋಲ್ಡ್ ಆಗಿ ಅಭಿನಯಿಸಿದ್ದಳು. ಟಾಲಿವುಡ್‌ನಲ್ಲಿ ಮೋಸ್ಟ್ ವಾಂಟೆಡ್ ಐಟಂ ಗರ್ಲ್ ಎನಿಸಿಕೊಂಡಿದ್ದಳು. ತಾನು ಪೂರ್ಣ ಪ್ರಮಾಣದ ನಾಯಕಿ ಆಗಲಿಲ್ಲ ಎಂಬ ಕೊರಗು ಹಂಸ ನಂದಿನಿಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ