ಬಾಲಿವುಡ್ ಐಟಂ ಬಾಂಬ್ ರಾಖಿ ಸಾವಂತ್ ಮತ್ತೆ ಸುದ್ದಿಯಲ್ಲಿದ್ದಾರೆ. ಈ ವರ್ಷ ಅವರು ಮದುವೆ ಮಾಡಿಕೊಳ್ಳಬೇಕೆಂದು ಆಕೆಯ ಬೆಸ್ಟ್ ಫ್ರೆಂಡ್, ಹಾಲಿವುಡ್ ನಟಿ, ರೂಪದರ್ಶಿ ಸೋಫಿಯಾ ಹಯಾತ್ ಹೇಳಿದ್ದಾರೆ. ರಾಖಿ ಸಾವಂತ್ ತುಂಬ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಅವರು ಕಲ್ಲಿನ ಮೇಲೆ ಪ್ರವಹಿಸುವ ನದಿ ತರಹ. ಅವರು ನಿಲ್ಲುವುದಿಲ್ಲ, ನಿರಂತರ ಪ್ರವಹಿಸುತ್ತಿರುತ್ತಾಳೆ ಎಂದಿದ್ದಾರೆ ಸೋಫಿಯಾ.
ಇನ್ನೂ ಮುಂದುವರೆದು ಹುಡುಗಿಯರೆಲ್ಲಾ ರಾಖಿ ಸಾವಂತ್‌ರನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಬೇಕು. ಆಕೆ ನನ್ನ ಸ್ನೇಹಿತೆ ಆಗಿರುವುದು ನನ್ನ ಅದೃಷ್ಟ ಎಂದು ಭಾವಿಸಿದ್ದೇನೆ ಎಂದಿದ್ದಾರೆ. ಆದರೆ ಅವರ ಬಗ್ಗೆ ನಾನು ಆತಂಕ ಪಡುತ್ತಿದ್ದೇನೆ. ಸಾಧ್ಯವಾದಷ್ಟು ಬೇಗ ರಾಖಿ ಮದುವೆಯಾದರೆ ಒಳ್ಳೆಯದು. ಈ ವರ್ಷದಲ್ಲಿ ಅವರು ಮದುವೆಯಾದರೆ ಉತ್ತಮ. ಆಕೆಗೆ ಒಳ್ಳೆಯ ಸಂಬಂಧವನ್ನೂ ನೋಡುತ್ತಿದ್ದೇನೆ ಎಂದಿದ್ದಾರೆ.
ಈ ಹಿಂದೆ ರಾಖಿ ಸಾವಂತ್ ಮಾಲಾ ಮಾಲ್ ವೀಕ್ಲಿ, ಕ್ರೇಜಿ 4, 1920 ಎಂಬ ಚಿತ್ರಗಳಲ್ಲಿ ನಟಿಸಿದ್ದರು. ಆ ಬಳಿಕ ರಾಖಿ ಕಾ ಸ್ವಯಂವರ ಎಂಬ ರಿಯಾಲಿಟಿ ಶೋ ನಿರ್ವಹಿಸಿ ಸುದ್ದಿಯಾಗಿದ್ದರು. ಆ ಶೋನಲ್ಲಿ ಗೆದ್ದ ಈಲೇಶ್ ಪರುಜನ್‌ವಾಲಾ ಎಂಬ ವ್ಯಕ್ತಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ಅವರಿಬ್ಬರೂ ಒಂದಾಗಲಿಲ್ಲ.