ಎದುರುಗಡೆ ಯಾರೇ ಇರಲಿ ಮುಖಮೂತಿ ನೋಡದೆ ಮಾತನಾಡುವ ಸೋನಂ ಇತ್ತೀಚೆಗೆ ಎದೆಸೀಳು ಪ್ರದರ್ಶಿಸಿ ಸಭ್ಯತೆಯ ಎಲ್ಲೆ ಮೀರಿರುವುದು ಅಭಿಮಾನಿಗಳನ್ನು ಕೆರಳಿಸಿದೆ. ಆಲಿಯಾ, ರಾಧಿಕಾ ಆಪ್ಟೆಯೊಂದಿಗೆ ಬೆರೆತು ಒಂದು ಚರ್ಚಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಸೋನಂ.
ಅವರು ಮಾತನಾಡುತ್ತಾ, ಚಿಕ್ಕಂದಿನಲ್ಲಿ ನಾನು ಸಹ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ. ಒಬ್ಬನೇನೋ ನನ್ನ ಎದೆಗೆ ಕೈಹಾಕಿದ್ದ ಎಂದಿದ್ದರು. ಕಟ್ ಮಾಡಿದರೆ ಮೊನ್ನ ನಡೆದ ಕಲರ್ಸ್ ಸ್ಟಾರ್ ಡಸ್ಟ್ ಪ್ರಶಸ್ತಿ ಸಮಾರಂಭದಲ್ಲಿ ಸೋನಂ ಎದೆಸೀಳು ಎಲ್ಲರನ್ನೂ ರೊಚ್ಚಿಗೆಬ್ಬಿಸಿತ್ತು.
ಕೆಲವರಂತೂ ಸೋನಂರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಹೇಳೋದು ಆಚಾರ, ಮಾಡೋದು ಅನಾಚಾರ ಎಂಬಂತಾಗಿದೆ ಸೋನಂ ಕಥೆ ಎನ್ನುತ್ತಿದ್ದಾರೆ. ಇನ್ನೂ ಕೆಲವರು ನೀವು ಈ ತರದ ಡ್ರೆಸ್ ಹಾಕಿದ್ರೆ ಮತ್ತೆ ಚಿಕ್ಕಂದಿನಲ್ಲಿ ನಡೆದದ್ದು ರಿಪೀಟ್ ಆಗೋ ಚಾನ್ಸ್ ಇದೆ ಎಂದಿದ್ದಾರೆ.