ನಟಿ ಸೋನಾರಿಕಾ ಭದೋರಿಯಾ ಮೈಚಳಿ ಬಿಟ್ಟು ಇದೇ ಮೊದಲ ಬಾರಿಗೆ ಎಲ್ಲರ ಕಣ್ಣುಕುಕ್ಕಿದ್ದಾರೆ. ಹಿಂದಿಯ ದೇವೋಂಕೆ ದೇವ್ ಮಹದೇವ ಪೌರಾಣಿಕ ಧಾರಾವಾಹಿಯ ಪಾರ್ವತಿ ಪಾತ್ರ ಪೋಷಿಸಿರುವ ಬೆಡಗಿಯನ್ನು ಈ ಅವತಾರದಲ್ಲಿ ನೋಡಿ ಕಿರುತೆರೆ ವೀಕ್ಷಕರು ಬೆಚ್ಚಿಬಿದ್ದಾರೆ.
ಪಾರ್ವತಿ ಪಾತ್ರ ಪೋಷಿಸಿರುವ ತಾರೆಯೊಬ್ಬರು ಈ ರೀತಿ ಕಾಣಿಸಿಕೊಂಡಿರುವುದು ಇದು ಎರಡನೇ ಸಲ. ಈ ಹಿಂದೊಮ್ಮೆ ಇದೇ ರೀತಿ ಕಾಣಿಸಿಕೊಂಡು ವಿವಾದಕ್ಕೂ ಕಾರಣವಾಗಿದ್ದರು. ಈಗ ಮತ್ತೊಮ್ಮೆ ಬಿಕಿನಿಯಲ್ಲಿ ಕಾಣಿಸಿಕೊಂಡು ಕೆಲವು ಸಂಪ್ರದಾಯವಾದಿಗಳ ಪಿತ್ತ ನೆತ್ತಿಗೇರುವಂತೆ ಮಾಡಿದ್ದಾರೆ.
ಸಮುದ್ರ ತೀರದಲ್ಲಿ ಸ್ಟ್ರಿಪ್ ಬಿಕಿನಿ ತೊಟ್ಟು ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹರಿಯಬಿಟ್ಟಿದ್ದಾರೆ. ಇತ್ತೀಚೆಗೆ ಬಾಲಿವುಡ್ನ ಸಾನ್ಸೆನ್-ದಿ ಲಾಸ್ಟ್ ಬ್ರೀತ್ ಎಂಬ ಚಿತ್ರದಲ್ಲಿ ಅಭಿನಯಿಸಿದ್ದರು. ಆದರೆ ಆ ಚಿತ್ರ ಬಾಕ್ಸಾಫೀಸಲ್ಲಿ ತೋಪಾಯಿತು ಎಂಬುದು ಬೇರೆ ವಿಚಾರ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.