ಲೈವ್ ಕಾರ್ಯಕ್ರಮದ ವೇಳೆ ತೀವ್ರ ಬೆನ್ನುನೋವು, ಆಸ್ಪತ್ರೆ ಸೇರಿದ ಸೋನು ನಿಗಂ (Video)

Krishnaveni K

ಸೋಮವಾರ, 3 ಫೆಬ್ರವರಿ 2025 (09:37 IST)
ಮುಂಬೈ: ಬಹುಭಾಷಾ ಗಾಯಕ ಸೋನು ನಿಗಂ ಲೈವ್ ಕಾರ್ಯಕ್ರಮದ ವೇಳೆಯೇ ತೀವ್ರ ಬೆನ್ನು ನೋವಿಗೆ ಒಳಗಾಗಿದ್ದು ಬಳಿಕ ಆಸ್ಪತ್ರೆ ಸೇರಿರುವ ಘಟನೆ ನಡೆದಿದೆ. ಈ ಬಗ್ಗೆ ಸ್ವತಃ ಅವರೇ ವಿಡಿಯೋ ಹಂಚಿಕೊಂಡಿದ್ದಾರೆ.

ಸೋನು ನಿಗಂ ನಿನ್ನೆ ಲೈವ್ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮಕ್ಕೆ ಮೊದಲೂ ಅವರಿಗೆ ಸಣ್ಣದಾಗಿ ಬೆನ್ನು ನೋವಿತ್ತು. ಹಾಗಿದ್ದರೂ ಒಪ್ಪಿಕೊಂಡ ಕಾರ್ಯಕ್ರಮಕ್ಕೆ ಮೋಸವಾಗಬಾರದೆಂದು ಮುಂದುವರಿದಿದ್ದಾರೆ.

ಸೋನು ನಿಗಂ ಕನ್ಸರ್ಟ್ ಎಂದರೆ ಅಲ್ಲಿ ಹಾಡಿನ ಜೊತೆಗೆ ಡ್ಯಾನ್ಸ್ ಕೂಡಾ ಇದ್ದೇ ಇರುತ್ತದೆ. ಸೋನು ಡ್ಯಾನ್ಸ್ ಮಾಡಿ ಹಾಡುತ್ತಾ ಪ್ರೇಕ್ಷಕರನ್ನೂ ಕುಣಿಸುತ್ತಾ ಮಜವಾಗಿ ಕಾರ್ಯಕ್ರಮ ನಡೆಸಿಕೊಡುತ್ತಾರೆ. ಇಂದೂ ಇದೇ ರೀತಿ ಆಗಿದೆ.

ಬೆನ್ನು ನೋವಿದ್ದರೂ ಡ್ಯಾನ್ಸ್ ಮಾಡಿಕೊಂಡು ಹಾಡಿ ಜನರಿಗೆ ಮನರಂಜನೆ ಒದಗಿಸಿದ್ದಾರೆ. ಆದರೆ ಅದರ ಬಳಿಕ ಅವರಿಗೆ ಎದ್ದು ನಡೆಯಲೂ ಆಗದ ಪರಿಸ್ಥಿತಿಯಾಗಿದೆ. ತೀವ್ರ ಬೆನ್ನು ನೋವಿಗೊಳಗಾದ ಅವರನ್ನು ಸಹಾಯಕರು ಹೆಚ್ಚು ಕಡಿಮೆ ಎತ್ತಿಕೊಂಡೇ ಹೋಗಿ ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಬಗ್ಗೆ ವಿಡಿಯೋ ಹಂಚಿಕೊಂಡ ಅವರು ದೇವಿ ಸರಸ್ವತಿಯೇ ನನ್ನನ್ನು ನಿನ್ನೆ ಕಾಪಾಡಿದಳು ಎಂದಿದ್ದಾರೆ. ಮೊದಲಿನಿಂದಲೂ ಅವರಿಗೆ ಬೆನ್ನು ನೋವಿನ ಸಮಸ್ಯೆಯಿದೆ. ಆಗಾಗ ಇದು ಕಾಡುತ್ತಲೇ ಇರುತ್ತದೆ. ಈ ಬಾರಿ ಕನ್ಸರ್ಟ್ ವೇಳೆಯೇ ಬಾಧೆ ಕೊಟ್ಟಿದೆ.

 
 
 
 
View this post on Instagram
 
 
 
 
 
 
 
 
 
 
 

A post shared by Sonu Nigam (@sonunigamofficial)

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ