ಜನತಾ ಕರ್ಫ್ಯೂ ಬೆಂಬಲಿಸಲು ಗಾಯಕ ಸೋನು ನಿಗಂ ವಿಶಿಷ್ಟ ಕಾರ್ಯಕ್ರಮ

ಭಾನುವಾರ, 22 ಮಾರ್ಚ್ 2020 (09:26 IST)
ಮುಂಬೈ: ಕೊರೋನಾವೈರಸ್ ಹರಡದಂತೆ ಇಂದಿಡೀ ಜನತಾ ಕರ್ಫ್ಯೂ ಆಚರಿಸಲು ಪ್ರಧಾನಿ ಮೋದಿ ಕರೆ ನೀಡಿದ್ದರು. ಇದನ್ನು ಬೆಂಬಲಿಸಿ ಗಾಯಕ ಸೋನು ನಿಗಂ ವಿಶಿಷ್ಟ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.


ಸದ್ಯಕ್ಕೆ ದುಬೈಯಲ್ಲಿರುವ ಸೋನು ಇಂದು ರಾತ್ರಿ ಜನತಾ ಕರ್ಫ್ಯೂ ಬೆಂಬಲಿಸಿ ಆನ್ ಲೈನ್ ಮೂಲಕ ಲೈವ್ ಕನ್ಸರ್ಟ್ ನಡೆಸಿಕೊಡಲಿದ್ದಾರೆ. ಸಾಮಾನ್ಯವಾಗಿ ಜನರ ಮಧ್ಯೆ ನಡೆಯುವ ಕಾರ್ಯಕ್ರಮವನ್ನು ಸೋಷಿಯಲ್ ಮೀಡಿಯಾ ಮೂಲಕ ಲೈವ್ ಆಗಿ ತೋರಿಸಲಿದ್ದಾರೆ.

ಸೋನು ಲೈವ್ ಕನ್ಸರ್ಟ್ ಇಂದು ರಾತ್ರಿ 8 ಗಂಟೆಗೆ ಅವರ ಫೇಸ್ ಬುಕ್, ಇನ್ ಸ್ಟಾಗ್ರಾಂ ಮತ್ತು ಯೂ ಟ್ಯೂಬ್ ಖಾತೆಯಲ್ಲಿ ಲೈವ್ ಆಗಿ ಪ್ರಸಾರವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ