ಮುಂಬೈ: ಕೊರೋನಾ ಕಾಲದಲ್ಲಿ ಜನ ಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುತ್ತಿರುವ ಬಾಲಿವುಡ್ ನಟ ಸೋನು ಸೂದ್ ಇದೀಗ ಮತ್ತೊಂದು ಮಹತ್ವದ ಹೆಜ್ಜೆಯಿಟ್ಟಿದ್ದಾರೆ.
ಇದೀಗ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಆಕಾಂಕ್ಷಿಗಳಿಗೆ ನಟ ಸೋನು ಸೂದ್ ಉಚಿತವಾಗಿ ಕೋಚಿಂಗ್ ನೀಡಲು ಸಹಾಯ ಮಾಡಲಿದ್ದಾರೆ. ದೆಹಲಿಯ ದಿಯಾ ಸಂಘಟನೆ ಜೊತೆ ಸೋನು ಕೈ ಜೋಡಿಸಲಿದ್ದಾರೆ.
ಈ ಇಬ್ಬರೂ ಜಂಟಿಯಾಗಿ ಸಂಭವಂ ಎಂಬ ಯೋಜನೆ ತಂದಿದ್ದು, ಇದರಡಿ ಫ್ರೀ ಕೋಚಿಂಗ್ ಜೊತೆಗೆ ಸ್ಕಾಲರ್ ಶಿಪ್ ಕೂಡಾ ನೀಡಲಾಗುತ್ತದೆ. ಇದರ ಪ್ರಯೋಜನ ಪಡೆಯಲು ಬಯಸುವವರು www.soodcharityfoundation.org ಎಂಬ ವೆಬ್ ಸೈಟ್ ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು.