ಹೈದರಾಬಾದ್ ಸರ್ಕಾರದ ವೆಬ್‌ಸೈಟ್‌ಲ್ಲಿ ಪ್ರಕಟವಾಯ್ತು ಸನ್ನಿ ಲಿಯೋನ್‌ಳ ನಗ್ನ ಚಿತ್ರ!
ಮಂಗಳವಾರ, 26 ಏಪ್ರಿಲ್ 2016 (13:04 IST)
ಹೈದ್ರಾಬಾದ್‌ನ ಮುನ್ಸಿಪಲ್ ಕಾರ್ಪೋರೇಷನ್ ಅಧಿಕೃತ ವೆಬ್‌ಸೈಟ್‌ನಲ್ಲಿ ಸನ್ನಿ ಲಿಯೋನ್‌ಳ ನಗ್ನ ಭಾವಚಿತ್ರ ಪ್ರಕಟಗೊಂಡಿದೆ. ಇದು ಎಲ್ಲಡೆ ಸುದ್ದಿ ಮಾಡಿದೆ. ಸರ್ಕಾರದ ಅಧಿಕೃತ ವೆಬ್‌ಸೈಟ್‌ಲ್ಲೇ ಇಂಥ ಚಿತ್ರಗಳು ಪ್ರಕಟಗೊಂಡಿರುವುದರ ಬಗ್ಗೆ ಎಲ್ಲಾ ಕಡೆ ಮಾತುಗಳು ಕೇಳಿ ಬರ್ತಿವೆ.
ಹೈದ್ರಾಬಾದ್ಸರ್ಕಾರ ವೆಬ್‌ಸೈಟ್‌ನ ಲಿಂಕ್ ಪೇಜ್‌ನಲ್ಲಿ ಸನ್ನಿ ಲಿಯೋನ್ ಫೋಟೊದಲ್ಲಿ ಪೋಸ್ ಕೊಟ್ಟು ನಗ್ನವಾಗಿರುವ ಫೋಟೊ ಕಾಣಿಸುತ್ತಿದೆ. ಆದರೆ ಟೆಕ್ನಿಕಲ್ ಟೀಮ್ ಚಿತ್ರಗಳನ್ನು ತೆಗೆದುಹಾಕಲು ಸಾಕಷ್ಟು ಪ್ರಯತ್ನ ಪಟ್ಟಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.
ಈ ಬಗ್ಗೆ ಈಗಾಗ್ಲೇ ದೂರು ದಾಖಲಿಸಲಾಗಿದೆ. ಯಾರಾದರೂ ವೆಬ್‌ಸೈಟ್‌ನ್ನು ಹ್ಯಾಕ್ ಮಾಡಿದ್ದಾರಾ? ಅಥವಾ ಉದ್ದೇಶಪೂರ್ವಕವಾಗಿ ಫೋಟೊ ಬಳಸಲಾಗಿದ್ಯಾ ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗ್ತಿದೆ.
ಆದರೆ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಹೇಳುವುದೇನೆಂದರೆ, ಸೈಟ್ ನಿರ್ವಹಣೆ ಕುರಿತು ವಿಚಾರಣೆ ನಡೆಸುತ್ತೇವೆ, ನಮ್ಮ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ.ಈ ಪ್ರಕರಣದ ಬಗ್ಗೆ ಜವಾಬ್ದಾರಿ ಹೊಂದಿದ್ದೇವೆ ಎಂದು ಮುನ್ಸಿಪಲ್ ಕಾರ್ಪೋರೇಷನ್ ತಿಳಿಸಿದೆ.