ಸುಶಾಂತ್ ಸಿಂಗ್ ರಜಪೂತ್ ತೀರಿಕೊಂಡ ಸುದ್ದಿ ಕೇಳಿ ಅತೀ ಹೆಚ್ಚು ದುಃಖಿಸಿದ್ದ ಮಾಜಿ ಗೆಳತಿ

ಬುಧವಾರ, 17 ಜೂನ್ 2020 (09:11 IST)
ಮುಂಬೈ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಂಡಿದ್ದು ಎಲ್ಲರಿಗೂ ಆಘಾತವುಂಟು ಮಾಡಿತ್ತು. ಆದರೆ ಅವರ ಸಾವಿನ ಸುದ್ದಿ ಕೇಳಿ ಅತೀ ಹೆಚ್ಚು ದುಃಖಿಸಿದ್ದು ಅವರ ಮಾಜಿ ಗೆಳತಿ ಅಂಕಿತಾ ಲೊಖಾಂಡೆಯಂತೆ!


ಈ ಬಗ್ಗೆ ಇವರಿಬ್ಬರ ಕಾಮನ್ ಫ್ರೆಂಡ್ ಪ್ರಾರ್ಥನಾ ಒಬ್ಬರು ಟಿವಿ ಸಂದರ್ಶನವೊಂದರ ವೇಳೆ ಹೇಳಿಕೊಂಡಿದ್ದಾರೆ. ಸುಶಾಂತ್ ತೀರಿಕೊಂಡ ಸುದ್ದಿ ಕೇಳಿ ಅಂಕಿತಾ ಇನ್ನಿಲ್ಲದಂತೆ ಅತ್ತಿದ್ದಳು ಎಂದಿದ್ದಾರೆ.

ಆಕೆಗೆ ಈಗ ಬೇರೊಬ್ಬರ ಆಸರೆಯಿದೆ. ಆದರೂ ಸುಶಾಂತ್ ತೀರಿಕೊಂಡ ಸುದ್ದಿ ಕೇಳಿ ಕುಸಿದು ಹೋಗಿದ್ದಳು. ನಾವೆಲ್ಲರೂ ‘ಪವಿತ್ರಾ ರಿಷ್ತಾ’ ಟೀಂನವರು ಒಟ್ಟಾಗಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಬೇಕೆಂದುಕೊಂಡಿದ್ದೆವು. ಆದರೆ 20 ಜನಕ್ಕೆ ಮಾತ್ರ ಅವಕಾಶ ಎಂಬ ಕಾರಣಕ್ಕೆ ಸಾಧ‍್ಯವಾಗಲಿಲ್ಲ ಎಂದು ಪ್ರಾರ್ಥನಾ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ