ತನ್ನ ಮಕ್ಕಳ ವಾರ್ಷಿಕ ಸಮಾರಂಭದಲ್ಲಿ ಭಾಗಿಯಾದ ಸುಷ್ಮೀತಾ ಸೇನ್

ಗುರುವಾರ, 5 ಮೇ 2016 (18:10 IST)
ಬಾಲಿವುಡ್‌ನ ನಟಿ ಸುಷ್ಮೀತಾ ಸೇನ್ ತಮ್ಮ ಮಕ್ಕಳ ವಾರ್ಷಿಕ ಸಮಾರಂಭಕ್ಕೆ ಭಾಗಿಯಾಗಿದ್ದಾರೆ.. ಈ ವೇಳೆ ಅವರು ಫಂಕ್ಷನ್ ಉದ್ದೇಶಿಸಿ ಮಾತನಾಡಿದ್ರು..ತಮ್ಮ ಇಬ್ಬರು ಪುತ್ರಿಯರ ಶಾಲೆಯಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿದ್ದ ಸುಷ್ಮೀತಾ ಸೇನ್ ಅಲ್ಲಿ ಚೀಫ್ ಗೆಸ್ಟ್ ಆಗಿ ಆಗಮಿಸಿದ್ರು..

ಈ ವೇಳೆ ಅವರು ತಮ್ಮ ಬಾಲ್ಯದ ಕೆಲ ನೆನಪುಗಳನ್ನು ಶೇರ್ ಮಾಡಿದ್ದರು.. ತಮ್ಮ ಶಾಲಾ ದಿನಗಳಲ್ಲಿ ಶಿಸ್ತಿನ ಬಗ್ಗೆ ಮಾತನಾಡಿದ ಸೇನ್, ಶಾಲೆ ಅಂದ್ರೆ ಅದು ಉತ್ತಮ ಸ್ನೇಹಿತರು ಜತೆ ಬೆರೆಯುವಂತೆ ಮಾಡುತ್ತದೆ. ಅಲ್ಲದೇ ಶಿಕ್ಷರನ್ನು ಗೌರವಿಸುವುದನ್ನು ಕಲಿಸುತ್ತದೆ. ಅಲ್ಲಿ ಕಲಿರುವಂತಹ ಕೆಲ ವಿಷಯಗಳನ್ನು ನಾವು ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದರು.
 
ಅಂದಹಾಗೆ ಸುಷ್ಮೀತಾ ಸೇನ್ ಇದುವರೆಗೂ ಮದುವೆಯಾಗಿಲ್ಲ..ಅವರು ಇಬ್ಬರು ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾರೆ.. ಇಬ್ಬರು ಮಕ್ಕಳ ಜತೆ ಸುಷ್ಮೀತಾ ಫಂಕ್ಷನ್‌ ನಲ್ಲಿ ಕಾಣಿಸಿಕೊಂಡ್ರು.. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ