ಮಗನ ಬರ್ತಡೇ ದಿನ ಮಾಜಿ ಪತಿ ಹೃತಿಕ್ ರೋಷನ್‌ ಜತೆಗಿನ ಪೋಟೋ ಶೇರ್ ಮಾಡಿದ ಸುಸೇನ್ ಖಾನ್‌

Sampriya

ಶುಕ್ರವಾರ, 28 ಮಾರ್ಚ್ 2025 (16:37 IST)
Photo Courtesy X
ಮುಂಬೈ: ಪುತ್ರ ಹ್ರೇಹಾನ್ ಅವರ 19 ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆ ನಟ ಹೃತಿಕ್ ರೋಷನ್ ಅವರ ಮಾಜಿ ಪತ್ನಿ ಸುಸೇನ್ ಖಾನ್ ಅವರು ಸುಂದರ ಚಿತ್ರಗಳ ಸರಣಿಯನ್ನು ಹಂಚಿಕೊಂಡಿದ್ದಾರೆ.

ಈ  ಪೋಸ್ಟ್‌ನಲ್ಲಿ ಹ್ರೇಹಾನ್ ಅವರ ಬಾಲ್ಯದ ಚಿತ್ರಗಳು, ಪೋಷಕರು ಮತ್ತು ಸ್ನೇಹಿತರೊಂದಿಗಿನ ಫೋಟೋಗಳನ್ನು ಶೇರ್‌ ಮಾಡಿದ್ದಾರೆ. ವಿಶೇಷ ಏನೆಂದರೆ ಹೃತಿಕ್ ರೋಷನ್ ಜತೆಗಿನ ಮಕ್ಕಳ ಫೋಟೋಗಳನ್ನು ಸುಸೇನ್ ಅವರು ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ಹೃತಿಕ್ ಮತ್ತು ಹ್ರೇಹಾನ್ ಕ್ಯಾಮೆರಾಗೆ ಸಂತೋಷದಿಂದ ಪೋಸ್ ನೀಡುತ್ತಿರುವುದನ್ನು ತೋರಿಸಲಾಗಿದೆ, ಆದರೆ ಸುಸೇನ್ ತನ್ನ ಮಾಜಿ ಪತಿಯನ್ನು ಪ್ರೀತಿಯಿಂದ ನೋಡುತ್ತಿರುವುದನ್ನು ಕಾಣಬಹುದು.

"ಹ್ಯಾಪಿ ಹ್ಯಾಪಿಯೆಸ್ಟ್‌ಟ್ಯಾಟ್ ಹುಟ್ಟುಹಬ್ಬ ನನ್ನ ರೇಸ್ಟಾರ್... ನೀನು ನನ್ನ ಜೀವನದಲ್ಲಿ ಬಂದ ಕ್ಷಣದಿಂದಲೇ ನೀನು ನನ್ನ ಬಲಿಷ್ಠ ವ್ಯಕ್ತಿಯಾಗಲು ನನಗೆ ಅಧಿಕಾರ ನೀಡಿದ್ದೆ.. ನೀನು ನನ್ನ ಪ್ರಪಂಚ. ನಿನ್ನ ಆತ್ಮ ನಿನ್ನ ಹೃದಯ ನಿನ್ನ ಮನಸ್ಸು... ಅತ್ಯಂತ ಸ್ಥಿತಿಸ್ಥಾಪಕತ್ವದ ಬಲವಾದ ಆತ್ಮ ಮತ್ತು ನೀನು ಮಾಡುವ ಎಲ್ಲದರ ಕಡೆಗೆ ನಿನ್ನ ಪ್ರಯಾಣವು ಎಲ್ಲವನ್ನೂ ಮತ್ತು ನಿನ್ನ ಸುತ್ತಲಿನ ಎಲ್ಲರನ್ನೂ ಬೆಳಗಿಸುತ್ತದೆ.. ಅದು ನಿನ್ನ ಸೂಪರ್ ಪವರ್... ನಾನು ನಿನ್ನನ್ನು ಪ್ರೀತಿಸುತ್ತೇನೆ ನನ್ನ ಸನ್‌ಶೈನ್... ನೀನು ನನ್ನಲ್ಲಿರುವ ಅತ್ಯುತ್ತಮ ಸ್ನೇಹಿತ.. ನನ್ನ ಸತ್ಯದ ಕನ್ನಡಿ ಮತ್ತು ನಿನ್ನ ತಾಯಿ ಎಂದು ನನಗೆ ತುಂಬಾ ಹೆಮ್ಮೆಯಿದೆ... ಪದಗಳು ಮತ್ತು ಅಭಿವ್ಯಕ್ತಿಗೆ ಮೀರಿ ನಿನ್ನನ್ನು ಪ್ರೀತಿಸುತ್ತೇನೆ..." ಎಂಬ ಶೀರ್ಷಿಕೆಯಲ್ಲಿ ಸುಸ್ಸೇನ್ ಖಾನ್ ಶೀರ್ಷಿಕೆ ಬರೆದಿದ್ದಾರೆ.

ನಟ ಹೃತಿಕ್ ರೋಷನ್ ಅವರು 2000ದಲ್ಲಿ ಸುಸೇನ್ ಖಾನ್ ಅವರನ್ನು ವಿವಾಹವಾದರು. ಈ ದಂಪತಿಗೆ ಹ್ರೇಹಾನ್ ರೋಷನ್ ಹಾಗೂ ಹೃಧನ್ ರೋಷನ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.  ಈ ಜೋಡಿ 2000ದಲ್ಲಿ ವಿಚ್ಚೇಧನ ಪಡೆದು ದೂರವಾದರೂ. ಡಿವೋರ್ಸ್ ಬಳಿಕವೂ ಇವರಿಬ್ಬರೂ ಉತ್ತಮ ಸ್ನೇಹಿತರಾಗಿಯೇ ಮುಂದುವರೆದಿದ್ದಾರೆ. ಕ್ಯಾಮೆರಾ ಮುಂದೆಯೂ ಅದೇ ಭಾವನೆಯನ್ನು ತೋರಿಸುತ್ತಾರೆ.

ಇದೀಗ ಮಗನ ಬರ್ತಡೇ ದಿನ ತಮ್ಮ ಮಾಜಿ ಪತಿಯೊಂದಿಗಿನ ಪೋಟೋವನ್ನು ಸುಸೇನ್ ಖಾನ್ ಶೇರ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ