ಈ ನಟನ ಬಿಟ್ಟು ಇನ್ಯಾರಿಗೂ ಕಿಸ್ ಮಾಡಲ್ಲ ಎಂದ ತಮನ್ನಾ ಭಾಟಿಯಾ

ಭಾನುವಾರ, 3 ಮಾರ್ಚ್ 2019 (09:22 IST)
ಮುಂಬೈ: ಸಿನಿಮಾದಲ್ಲಿ ಅಭಿನಯಿಸುವಾಗ ಕಿಸ್ಸಿಂಗ್ ದೃಶ್ಯಗಳಿದ್ದರೆ ನೋ ಎನ್ನುವ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಈ ಸ್ಟಾರ್ ನಟನಿಗೆ ಮಾತ್ರ ತನ್ನ ರೂಲ್ಸ್ ಬ್ರೇಕ್ ಮಾಡ್ತಾಳಂತೆ.


ತಮನ್ನಾ ತಮ್ಮ ಸಿನಿಮಾಗಳಿಗೆ ಸಹಿ ಹಾಕುವಾಗ ಕಿಸ್ ದೃಶ್ಯಗಳಿಲ್ಲ ಎಂದು ಖಾತ್ರಿಪಡಿಸಿಕೊಂಡೇ ಸಹಿ ಮಾಡುತ್ತಾರಂತೆ. ಆದರೆ ತಮ್ಮ ಮೆಚ್ಚಿನ ನಟ ಹೃತಿಕ್ ರೋಷನ್ ಆದರೆ ಕಿಸ್ ಮಾಡಕ್ಕೂ ಸಿದ್ಧ ಎಂದಿದ್ದಾರೆ  ತಮನ್ನಾ.

ತಮ್ಮ ವೃತ್ತಿ ಜೀವನದ ಆರಂಭದಿಂದಲೂ ಹೃತಿಕ್ ಎಂದರೆ ತಮನ್ನಾಗೆ ಪಂಚಪ್ರಾಣವಂತೆ. ಇತ್ತೀಚೆಗೆ ಅವರನ್ನು ಭೇಟಿಯಾದಾಗ ಅವರನ್ನು ಮಾತನಾಡಿಸಿ ಫೋಟೋ ತೆಗೆಸಿಕೊಂಡಿದ್ದಾರೆ. ಒಂದು ವೇಳೆ ಹೃತಿಕ್ ಜತೆ ತೆರೆ ಹಂಚಿಕೊಳ್ಳುವ ಅವಕಾಶ ಸಿಕ್ಕರೆ, ಕಿಸ್ ಮಾಡುವ ಸನ್ನಿವೇಶ ಬಂದರೂ ಹಿಂದೆ ಮುಂದೆ ನೋಡಲ್ಲ ಎಂದಿದ್ದಾರೆ ತಮನ್ನಾ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ